ಬಿಗ್ಬಾಸ್ ಕನ್ನಡ ಫಿನಾಲೆ ಸಮೀಪಿಸುತ್ತಿದ್ದಂತೆ, ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೊಮೋವೊಂದು ಚರ್ಚೆಗೆ ಕಾರಣವಾಗಿದೆ. ಕೆಲ ಸ್ಪರ್ಧಿಗಳು ಅಭಿಮಾನಿಗಳನ್ನು ಭೇಟಿಯಾಗಿದ್ದರೆ, ಕೆಲವರು ಮಿಸ್ ಆಗಿದ್ದಾರೆ. ಇದು ಬಿಗ್ಬಾಸ್ ವಿನ್ ಮತ್ತು ರನ್ನರ್ಸ್ ಅಪ್ ಆಗುವವರ ಹಿಂಟ್ ಎಂದೇ ಬಣ್ಣಿಸಲಾಗುತ್ತಿದೆ!

ಬಿಗ್ಬಾಸ್ ಕನ್ನಡದಲ್ಲಿ ವಿನ್ನರ್ ಯಾರು ಎಂದು ಘೋಷಿಸುವ ಫಿನಾಲೆಗೆ ಕೆಲವೇ ದಿನಗಳಿವೆ. ಇದರ ಬೆನ್ನಲ್ಲೇ ಯಾರನ್ನು ಗೆಲ್ಲಿಸಲು ಬಿಗ್ಬಾಸ್ ಪಣ ತೊಟ್ಟಿದೆ ಎನ್ನುವ ಬಗ್ಗೆ ವೀಕ್ಷಕರು ತಮ್ಮದೇ ಆದ ರೀತಿಯಲ್ಲಿ ಪರಾಮರ್ಶೆ ಮಾಡುತ್ತಲೇ ಇರುತ್ತಾರೆ. ಬಿಗ್ಬಾಸ್ನಲ್ಲಿ ಗಿಲ್ಲಿ ನಟ ವಿನ್ನರ್ ಎನ್ನುವುದು ಹಲವರ ಅಭಿಪ್ರಾಯವಾದರೂ, ಕೊನೆಯ ಕ್ಷಣದಲ್ಲಿ ಏನು ಬೇಕಾದರೂ ನಿರ್ಧಾರ ಬದಲಾಗಬಹುದು.

ಆದರೆ, ಇದೀಗ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೋ ಒಂದನ್ನು ನೋಡಿ ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ರೀತಿಯ ಚರ್ಚೆಗಳು ಶುರುವಾಗಿದೆ. ಇದರಲ್ಲಿ ಕೆಲವು ಸ್ಪರ್ಧಿಗಳಿಗೆ ತಮ್ಮ ಅಭಿಮಾನಿಗಳನ್ನು ಮೀಟ್ ಮಾಡಿ ಮಾತನಾಡಿಸುವ ಅವಕಾಶವನ್ನು ನೀಡಲಾಗಿದೆ. ಇದೇ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಲಾಗಿದೆ.

ಇದಾಗಲೇ ಅಭಿಮಾನಿಗಳಿಗೆ ಭೇಟಿಯಾಗಲು ಅವಕಾಶ ಸಿಕ್ಕಿರುವುದು ಕಾವ್ಯಾ ಶೈವ, ಧ್ರುವಂತ್ ಮತ್ತು ಧನುಷ್ ಅವರಿಗೆ. ಉಳಿದಂತೆ ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಮತ್ತು ಮ್ಯೂಟಂಟ್ ರಘು ಅವರು ಈ ಪ್ರೊಮೋದಲ್ಲಿ ಕಾಣಿಸಲಿಲ್ಲ. ಆದ್ದರಿಂದ ಇದಕ್ಕೆ ವಿಭಿನ್ನ ರೀತಿಯಲ್ಲಿ ಅರ್ಥ ನೀಡಲಾಗುತ್ತಿದೆ.

ಅಷ್ಟಕ್ಕೂ ಕೊನೆಯಲ್ಲಿ ಇರುವವರು ಟಾಪ್ 5 ಸ್ಪರ್ಧಿಗಳು. ಅಲ್ಲಿಂದ ಟಾಪ್ 3ಗೆ ಬಂದು ಕೊನೆಯಲ್ಲಿ ವಿನ್ನರ್ ಘೋಷಣೆ ಮಾಡಲಾಗುತ್ತದೆ. ಅದೇ ರೀತಿ ಈ ಬಾರಿ ಟಾಪ್ 3ನಲ್ಲಿ ಇರುವವರು ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಎನ್ನುವುದು ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಇರುವ ಕ್ರೇಜ್ನಿಂದ ತಿಳಿದುಬರುತ್ತದೆ.

ಈಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಈ ಮೂವರೂ ಇಲ್ಲ. ಅಲ್ಲಿಗೆ ಅವರು ಟಾಪ್ 3ಗೆ ಕನ್ಫರ್ಮ್ ಆದಂತೆ ಎನ್ನಲಾಗುತ್ತಿದೆ. ಇನ್ನು ಟಾಪ್ 4ನಲ್ಲಿ ಮ್ಯೂಟಂಟ್ ರಘು ಇರಬಹುದೇ ಎಂದು ಊಹಿಸಲಾಗುತ್ತಿದೆ. ಉಳಿದ ಮೂವರನ್ನು ಅಭಿಮಾನಿಗಳಿಗೆ ಒಪ್ಪಿಸಿದ್ದು, ಅವರಲ್ಲಿ ಯಾರು ಹೆಚ್ಚು ವೋಟ್ ಪಡೆಯುತ್ತಾರೋ ಅವರನ್ನು ಟಾಪ್ 5ಗೆ ಉಳಿಸಿಕೊಳ್ಳಬಹುದು ಎನ್ನುವುದು ನೆಟ್ಟಿಗರ ಅಭಿಮತ.

ಒಟ್ಟಿನಲ್ಲಿ ಬಿಗ್ಬಾಸ್ ಮನಸ್ಸಿನಲ್ಲಿ ಏನಿದೆ ಎಂದು ಹೇಳುವುದು ಕಷ್ಟ. ಆದರೆ ವೀಕ್ಷಕರಂತೂ ವಿನ್ನರ್ ಘೋಷಣೆಯಾಗುವವರೆಗೂ ಎಲ್ಲಾ ಕೆಲಸ ಬದಿಗೊತ್ತಿ, ಬಿಗ್ಬಾಸ್ ವಿನ್ನರ್ ಮತ್ತು ರನ್ನರ್ ಅಪ್ ಯಾರಾಗಬಹುದು ಎಂದು ತಲೆ ಕೆಡಿಸಿಕೊಂಡಂತೆ ಕಾಣುತ್ತಿದೆ!

Source link
BBK 12: ಫಿನಾಲೆಗೂ ಮುನ್ನವೇ ಗೆಲ್ಲುವವರ ಹಿಂಟ್ ಕೊಟ್ಟೇ ಬಿಟ್ಟಿತಾ Bigg Boss? ಪ್ರೊಮೋದಲ್ಲಿ ರಿವೀಲ್?