ಚಿಕ್ಕಮಗಳೂರು, (ಫೆಬ್ರವರಿ 04): ಯಾವುದೇ ಶುಭಕಾರ್ಯ ಮಾಡಬೇಕು ಅಂದ್ರು ಶಾಸ್ತ್ರ ಜ್ಯೋತಿಷ್ಯ (ಜ್ಯೋತಿಷ್ಯ) ಕೇಳುವುದು ವಾಡಿಕೆ, ನಂಬಿಕೆ. ಇದೆ ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಜ್ಯೋತಿಷಿ ಒಬ್ಬ ಮಾನಗೇಡಿ ಕೆಲಸ ಮಾಡಿದ್ದಾನೆ. ಮದುವೆಯ ಬಗ್ಗೆ ತನ್ನ ಬಳಿ ಜ್ಯೋತಿಷ್ಯ ಕೇಳಲು ಬಂದ ಯುವತಿಯ ಬಾಳಲ್ಲಿ ಜ್ಯೋತಿಷಿ (ಜ್ಯೋತಿಷಿ)ಚೆಲ್ಲಾಟವಾಡಿದ್ದಾನೆ. ಹೌದು..ಸಮಸ್ಯೆ ನಿವಾರಣೆ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಚಿಕ್ಕಮಗಳೂರು (ಚಿಕ್ಕಮಗಳೂರು) ಜಿಲ್ಲೆಯ ಮೂಡಿಗೆರೆ ತಾಲೂಕು ಬಣಕಲ್ ಪೊಲೀಸ್ ಠಾಣೆಗೆ ಈ ಘಟನೆ ನಡೆದಿದೆ.
ಕಾಮುಕ ಅರ್ಚಕ ಕೃಷ್ಣ ರಾವ್ ಎಂಬಾತ ದಾವಣಗೆರೆ ಮೂಲದ ಈ ಕ್ರಿಮಿ, 7 ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೊರಟ್ಟಿ ಗ್ರಾಮಕ್ಕೆ ಬಂದು ನೆಲೆಸಿದ್ದು, ಗ್ರಾಮದ ಪಾರ್ವತಿ ಈಶ್ವರ ದೇಗುಲದ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದಾರೆ. ಜೊತೆ ಜೊತೆಗೆ ಜ್ಯೋತಿಷ್ಯವನ್ನ ಸಹ ಹೇಳುತ್ತಿದ್ದ. ಹೀಗಾಗಿ ದಲಿತ ಸಮುದಾಯದ 23 ವರ್ಷದ ಯುವತಿಯೊಬ್ಬಳು ಬಂದಿದ್ದು, ಮದ್ವೆ ವಿಷಯದಲ್ಲಿ ತೊಂದರೆ ಆಗುತ್ತಿದೆ ಎಂದು ಅಳಲು ತೊಡಿಕೊಂಡಿದ್ದಾಳೆ. ಅವಳ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡ ಕೃಷ್ಣ ರಾವ್, ಯುವತಿ ಮೇಲೆ ಹಲವು ಸಲ ಅತ್ಯಾಚಾರ ಮಾಡಿದ್ದಾನೆ.
ಇದನ್ನೂ ಓದಿ: ಜ್ಯೋತಿಷಿ ಹೇಳ್ತಿದ್ದವನ ಭವಿಷ್ಯವೇ ತಲೆಕೆಳಗಾಯ್ತು: ಕಮಲಾಕರ್ ಭಟ್-ಸುಚಿತ್ರಾಳ ಮತ್ತಷ್ಟು ಶೋಕಿ ಪುರಾಣ ಬಯಲು
ಜಾತಕದಲ್ಲಿ ದೋಷವಿದೆ ಎಂದು ಹೇಳಿದ್ದು, ಅದರ ಸಮಸ್ಯೆ ನಿವಾರಣೆ ಹೆಸರಲ್ಲಿ ಯುವತಿ ಮೇಲೆ ಕಳೆದೊಂದು ವರ್ಷದ ನಂತರ ಹಲವು ಸಲ ಅತ್ಯಾಚಾರ ಮಾಡಿದ್ದಾನೆ. ಇದೀಗ ಯುವತಿ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರನ್ನಾಧರಿಸಿ ಆರೋಪಿ, ಆರೋಪಿ ಕಲಂ 64(2)(ಎಂ) ಹಾಗೂ ಅತ್ಯಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅದರ ಜೊತೆಗೆ ಅಟ್ರಾಸಿಟಿ ಕೇಸ್ ಕೂಡ ದಾಖಲಿಸಿಕೊಂಡಿದ್ದು, ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.