ಕಳೆದ ಕೆಲವು ವರ್ಷಗಳಿಂದ ಹಲವು ವಂಚನೆ ಪ್ರಕರಣಗಳಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಉದ್ಯಮಿ ಅನಿಲ್‌ ಅಂಬಾನಿ, ಅವರು ಎಸಗಿರಬಹುದಾದ ಅಕ್ರಮದ ಮೊತ್ತ 14000 ಕೋಟಿ ರು | Anil Ambanis Reliance Communications Loan Fraud Totals Rs 14000 Crore Sources

ಕಳೆದ ಕೆಲವು ವರ್ಷಗಳಿಂದ ಹಲವು ವಂಚನೆ ಪ್ರಕರಣಗಳಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಉದ್ಯಮಿ ಅನಿಲ್‌ ಅಂಬಾನಿ, ಅವರು ಎಸಗಿರಬಹುದಾದ ಅಕ್ರಮದ ಮೊತ್ತ 14000 ಕೋಟಿ ರು | Anil Ambanis Reliance Communications Loan Fraud Totals Rs 14000 Crore Sources


ಕಳೆದ ಕೆಲವು ವರ್ಷಗಳಿಂದ ಹಲವು ವಂಚನೆ ಪ್ರಕರಣಗಳಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಉದ್ಯಮಿ ಅನಿಲ್‌ ಅಂಬಾನಿ, ಅವರು ಎಸಗಿರಬಹುದಾದ ಅಕ್ರಮದ ಮೊತ್ತ 14000 ಕೋಟಿ ರು.ಗೂ ಹೆಚ್ಚಿರಬಹುದು ಎಂದು ವರದಿಯೊಂದು ತಿಳಿಸಿದೆ.

ನವದೆಹಲಿ: ಕಳೆದ ಕೆಲವು ವರ್ಷಗಳಿಂದ ಹಲವು ವಂಚನೆ ಪ್ರಕರಣಗಳಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಉದ್ಯಮಿ ಅನಿಲ್‌ ಅಂಬಾನಿ, ಅವರು ಎಸಗಿರಬಹುದಾದ ಅಕ್ರಮದ ಮೊತ್ತ 14000 ಕೋಟಿ ರು.ಗೂ ಹೆಚ್ಚಿರಬಹುದು ಎಂದು ವರದಿಯೊಂದು ತಿಳಿಸಿದೆ. ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆ ಸೆಬಿ ನೀಡಿರುವ ಸುಳಿವು ಆಧರಿಸಿಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ಈ ಕುರಿತ ವರದಿ ಪ್ರಕಟಿಸಿದೆ.

ಒಂದು ವೇಳೆ ಇದು ಖಚಿತವಾದರೆ, ಇದು ಉದ್ಯಮಿಗಳಾದ ವಿಜಯ್‌ ಮಲ್ಯ ಮತ್ತು ನೀರವ್‌ ಮೋದಿ ನಡೆಸಿದ ಪಿಎನ್‌ಬಿ ವಂಚನೆ ಪ್ರಕರಣಕ್ಕಿಂತಲೂ ದೊಡ್ಡ ಹಗರಣವಾಗಲಿದೆ.

₹2850 ಕೋಟಿ ವಂಚನೆ:

ಯಸ್‌ ಬ್ಯಾಂಕ್‌ನಿಂದ 3000 ಕೋಟಿ ರು.ಸಾಲ ಪಡೆದಿದ್ದ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್ ಇನ್‌ಫ್ರಾ, ಇದೇ ಅವಧಿಯಲ್ಲಿ ಎಫ್‌ಡಿ ರೂಪದಲ್ಲಿ ಯಸ್‌ ಬ್ಯಾಂಕ್‌ನಲ್ಲಿ 2850 ಕೋಟಿ ರು. ಮೊತ್ತದ ಬಾಂಡ್‌ ಖರೀದಿಸಿತ್ತು. ಬಳಿಕ ಅದನ್ನು ವಸೂಲಿಯಾಗದ ಮೊತ್ತ ಎಂದು ಕಂಪನಿಗಳ ದಾಖಲೆಗಳಲ್ಲಿ ನಮೂದಿಸಿ ಆ ಹಣವನ್ನು ಲಪಟಾಯಿಸಲಾಗಿದೆ ಎಂಬುದು ಇ.ಡಿ. ಶಂಕೆ.

₹1050 ಕೋಟಿ ವಂಚನೆ:

ಆರ್‌ಕಾಂ ಕೆನರಾ ಬ್ಯಾಂಕ್‌ಗೆ 1,050 ಕೋಟಿ ರು.ಗಿಂತಲೂ ಅಧಿಕ ಮೊತ್ತದ ವಂಚನೆ ಮಾಡಿದ ಬಗ್ಗೆಯೂ ಇ.ಡಿ. ತನಿಖೆ ನಡೆಸುತ್ತಿದೆ. ಈ ಹಣವನ್ನು ವಿದೇಶಗಳಲ್ಲಿ ಹೂಡಿಕೆ ಮಾಡಿದ ಬಗ್ಗೆ ಮಾಹಿತಿ ಇದ್ದು ಅದರ ಬಗ್ಗೆ ತನಿಖೆ ಆರಂಭಿಸಿದೆ.

₹10000 ಕೋಟಿ ವಂಚನೆ:

ರಿಲಯನ್ಸ್‌ ಇನ್ಫ್ರಾ ಕಂಪನಿಯು, ತನ್ನ ಸಾವಿರಾರು ಕೋಟಿ ರು.ಹಣವನ್ನು ಠೇವಣಿಗಳ ರೂಪದಲ್ಲಿ ಅವರದ್ದೇ ಒಡೆತನದ ರಾಗಾ ಸಮೂಹದ ಕಂಪನಿಗಳಿಗೆ ವರ್ಗಾಯಿಸಿತ್ತು. ಬಳಿಕ ಈ ಪೈಕಿ 4 ಕೋಟಿ ರು.ಗಳನ್ನು ಮಾತ್ರವೇ ನಗದು ರೂಪದಲ್ಲಿ ಸ್ವೀಕರಿಸಿತ್ತು. ಉಳಿದ 5480 ಕೋಟಿ ರು. ಮೊತ್ತವನ್ನು ಹೇರ್‌ಕಟ್‌ (ಉದ್ಯಮ ಭಾಷೆಯಲ್ಲಿ ನಿಗದಿತ ಮೊತ್ತದಲ್ಲಿ ಕಡಿತ ಮಾಡಿ ಬಾಕಿ ಉಳಿದ ಮೊತ್ತ ಸ್ವೀಕಾರ) ಎಂದು ತೋರಿಸಿದ್ದರೆ, 6499 ಕೋಟಿ ರು. ಹಣವನ್ನು ಬೇರೆ ಬೇರೆ ಲೆಕ್ಕಾಚಾರ ತೋರಿಸಿ ಚುಕ್ತಾ ಮಾಡಲಾಗಿದೆ. ಈ ವ್ಯವಹಾರವೊಂದರಲ್ಲೇ 10000 ಕೋಟಿ ರು.ಹಣವನ್ನು ಅಕ್ರಮವಾಗಿ ಬೇರೆ ಕಡೆಗೆ ವರ್ಗಾಯಿಸಿ ಅಕ್ರಮ ಎಸಗಲಾಗಿದೆ ಎಂಬುದು ಇ.ಡಿ. ಆರೋಪ.



Source link

Leave a Reply

Your email address will not be published. Required fields are marked *