ಬೆಂಗಳೂರಿನಿಂದ ದುಬೈಗೆ ಬಸ್ ಸಂಚಾರ! ಹೋಗುವುದು ಹೇಗೆ? ಡ್ರೈವರ್​ ಕೊಟ್ಟ ಮಾಹಿತಿ ಸರಿಯಾಗಿ ಕೇಳ | Funny Video Gone Viral Where Driver Says About Bus To Dubai From Bangalore Suc

ಬೆಂಗಳೂರಿನಿಂದ ದುಬೈಗೆ ಬಸ್ ಸಂಚಾರ! ಹೋಗುವುದು ಹೇಗೆ? ಡ್ರೈವರ್​ ಕೊಟ್ಟ ಮಾಹಿತಿ ಸರಿಯಾಗಿ ಕೇಳ | Funny Video Gone Viral Where Driver Says About Bus To Dubai From Bangalore Suc



ಬೆಂಗಳೂರಿನಿಂದ ದುಬೈಗೆ ಬಸ್ ಸಂಚಾರ! ಹೋಗುವುದು ಹೇಗೆ? ಡ್ರೈವರ್​ ಕೊಟ್ಟ ಮಾಹಿತಿ ಸರಿಯಾಗಿ ಕೇಳ | Funny Video Gone Viral Where Driver Says About Bus To Dubai From Bangalore Suc

ಬೆಂಗಳೂರಿನಿಂದ ದುಬೈಗೆ ಬಸ್ ಇದೆಯೇ ಎಂದು ಯುವಕ-ಯುವತಿಯರಿಬ್ಬರು ಬಿಎಂಟಿಸಿ ಚಾಲಕನಿಗೆ ಕೇಳುವ ವಿಡಿಯೋವೊಂದು ವೈರಲ್ ಆಗಿದೆ. ಚಾಲಕನು ಗಂಭೀರವಾಗಿಯೇ ಮೆಜೆಸ್ಟಿಕ್‌ನಿಂದ ದುಬೈಗೆ ಬಸ್ ಸಿಗುತ್ತದೆ ಎಂದು ಮಾರ್ಗದರ್ಶನ ನೀಡಿರುವುದು ನೆಟ್ಟಿಗರಲ್ಲಿ ನಗು ಉಕ್ಕಿಸಿದೆ.

ಬೆಂಗಳೂರಿನ ಮೆಜೆಸ್ಟಿಕ್​ ಬಸ್​ ನಿಲ್ದಾಣದಿಂದ ಸಿಂಗಪುರಕ್ಕೆ ಬಸ್​ ಇರುವುದು ಬೆಂಗಳೂರಿಗರಿಗೆ ಗೊತ್ತೇ ಇದೆ. ಹಾಗೆಂದು ಇದು ವಿದೇಶದ ಸಿಂಗಪುರ ಅಲ್ಲ ಮತ್ತೆ. ಒಂದು ಪ್ರದೇಶದ ಹೆಸರು ಸಿಂಗಪುರ. ಆದರೆ ಇದನ್ನು ಹಲವು ಬಾರಿ ತಮಾಷೆಯಾಗಿ ಬಳಕೆ ಮಾಡುವುದು ಉಂಟು. ಮೆಜೆಸ್ಟಿಕ್​ನಿಂದ ಸಿಂಗಪುರಕ್ಕೆ ಬಿಎಂಟಿಸಿ ಬಸ್​ ಇದೆ ಎಂದು ಹೇಳಿದಾಗ ಹೊರಗಿನವರು ಶಾಕ್​ ಆಗುವುದು ಇದೆ. ಆದರೆ ಇಲ್ಲಿ ಹೇಳ್ತಿರೋದು ಬೆಂಗಳೂರಿನಲ್ಲಿ ಇರುವ ಸಿಂಗಪುರ ಅಲ್ಲ, ಆದರೆ ವಿದೇಶವೇ ಆಗಿರುವ ದುಬೈ ಬಗ್ಗೆ. ಇರಾನ್​, ಇಸ್ರೇಲ್​, ಅಮೆರಿಕದ ಸಂಘರ್ಷದ ನಡುವೆ ದುಬೈ ಕೂಡ ಈಗ ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ. ಅಲ್ಲಿಯೇ ಯುದ್ಧದ ಭೀತಿ ಎದುರಾಗಿದೆ.

ಬೆಂಗಳೂರಿನಿಂದ ದುಬೈಗೆ ಬಸ್​

ಇದರ ನಡುವೆಯೇ, ಬೆಂಗಳೂರಿನಿಂದ ದುಬೈಗೆ ಬಸ್​ ಸಂಚಾರ ಇದೆ ಎನ್ನುವ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಜನರನ್ನು ನಕ್ಕು ನಗಿಸುತ್ತಿದೆ. miss__entertainer ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. ರೀಲ್ಸ್​ ಮಾಡುವ ಯುವಕ ಮತ್ತು ಯುವತಿ ಇಬ್ಬರು ಬಿಎಂಟಿಸಿ ಬಸ್​ ನಿಲ್ದಾಣಕ್ಕೆ ಬಂದು, ಅಲ್ಲಿರುವ ಬಸ್​ ಒಂದರ ಡ್ರೈವರ್​ಗೆ ಇದು ದುಬೈಗೆ ಹೋಗತ್ತಾ ಎಂದು ಪ್ರಶ್ನಿಸಿದ್ದಾರೆ. ಮೊದಲಿಗೆ ಡ್ರೈವರ್​ಗೆ ಶಿವಾಜಿನಗರ ಎಂದು ಕೇಳಿಸಿದೆ. ಆಮೇಲೆ ದುಬೈಗೆ ಎಂದಾಗ ಈ ಬಸ್​ ಹೋಗಲ್ಲಾ ಎಂದಿದ್ದಾರೆ. ಆಗ ಯುವತಿ, ಇದು ಬಸ್​ ತಾನೆ, ಹೋಗಲ್ವಾ ಎಂದು ಪ್ರಶ್ನಿಸಿದಾಗ, ಇದು ಬಸ್ಸೇ ಆದರೆ ದುಬೈಗೆ ಹೋಗಲ್ಲ ಎಂದಿದ್ದಾರೆ.

ಯುವತಿ ಪ್ರಶ್ನೆ

ನಮಗೆ ಅಲ್ಲಿ ಇರುವ ಒಬ್ಬರು ಈ ಬಸ್​ ದುಬೈಗೆ ಹೋಗತ್ತೆ ಎಂದರು. ನೀವು ನೋಡಿದ್ರೆ ಹೋಗಲ್ಲ ಅನ್ನುತ್ತಿದ್ದೀರಿ, ಹಾಗಿದ್ದರೆ ಯಾವ ಬಸ್ ದುಬೈಗೆ ಹೋಗುತ್ತದೆ ಎಂದು ಏನೂ ಅರಿಯದವರ ಹಾಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಆ ಡ್ರೈವರ್​, ನೋಡಿ ನೀವು ಆ ಫ್ಲ್ಯಾಟ್​ಫಾರ್ಮ್​ಗೆ ಹೋಗಿ. ಅಲ್ಲಿ ಮೆಜೆಸ್ಟಿಕ್​ಗೆ ಹೋಗುವ ಬಸ್​ಗಳು ಸಿಗುತ್ತವೆ. ಆ ಬಸ್​ ಹತ್ತಿ, ಅಲ್ಲಿ ನಿಮಗೆ ದುಬೈ ಬಸ್​ ಸಿಗುತ್ತದೆ ಎಂದಿದ್ದಾರೆ.

ಮಾರ್ಗದರ್ಶನ ಮಾಡಿದ ಡ್ರೈವರ್​

ಅರೆ ಕ್ಷಣ ನಗು ಬಂದರೂ ತಡೆದುಕೊಂಡು ಈ ಇಬ್ಬರು ಕಿತಾಪತಿಗಳು, ಹೌದಾ, ನಿಜಕ್ಕೂ ಮೆಜೆಸ್ಟಿಕ್​ನಿಂದ ದುಬೈಗೆ ಹೋಗುವ ಬಸ್​ ಸಿಗುತ್ತದಾ ಎಂದು ಪ್ರಶ್ನಿಸಿದಾಗ, ಡ್ರೈವರ್​ ಹೌದು. ನೀವು ಅಲ್ಲಿ ಬಸ್​ ಚೇಂಜ್ ಮಾಡಬೇಕಾಗುತ್ತದೆ ಎಂದೆಲ್ಲಾ ಮಾರ್ಗದರ್ಶನ ಕೊಟ್ಟಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಲೇ ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. ಡ್ರೈವರ್​ ಇಲ್ಲಿ ಜೋಕ್​ ಮಾಡಿದಂತೆ ಕಾಣಿಸುತ್ತಿಲ್ಲ. ನಿಜಕ್ಕೂ ಅವರು ಬೆಂಗಳೂರಿನಲ್ಲಿ ದುಬೈ ಎನ್ನುವ ಪ್ರದೇಶ ಇದೆ ಎಂದು ಅಂದುಕೊಂಡರೋ ಗೊತ್ತಿಲ್ಲ. ಸಿಂಗಪುರದಂತೆಯೇ ದುಬೈ ಎನ್ನುವ ಸ್ಥಳವೂ ಇರಬಹುದು ಎಂದುಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಬೆಂಗಳೂರಿನಿಂದ ದುಬೈಗೆ ಅದೂ ಬಿಎಂಟಿಸಿ ಬಸ್​ ಹೋಗುತ್ತದೆ ಎನ್ನುವುದೇ ವಿಶೇಷ.



Source link

Leave a Reply

Your email address will not be published. Required fields are marked *