
ಹಾಸನದಲ್ಲಿ ತಹಸೀಲ್ದಾರ್ ಗೀತಾ ಅವರ ಕಾರಿಗೆ ನಿಗೂಢವಾಗಿ ಬೆಂಕಿ ಹೊತ್ತಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ಶಂಕೆ ವ್ಯಕ್ತವಾಗಿದ್ದರೂ, ದುಷ್ಕೃತ್ಯದ ಸಾಧ್ಯತೆಯನ್ನು ತಳ್ಳಿಹಾಕಲಾಗುತ್ತಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ತಹಸೀಲ್ದಾರ್ ಗೀತಾ ಅವರಿಗೆ ಸೇರಿದ ಖಾಸಗಿ ಕಾರು ಬೆಂಕಿಗೆ ಆಹುತಿಯಾದ ಘಟನೆ ಜುಲೈ 5ರ ಶನಿವಾರ ರಾತ್ರಿ ನಡೆದಿದೆ. ಹಾಸನ ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ.
ತಹಸೀಲ್ದಾರ್ ಗೀತಾ ತಮ್ಮ ಮನೆ ಎದುರು KA-02-MP-8646 ಸಂಖ್ಯೆಯ ಎಕ್ಸ್ ಕ್ರಾಸ್ ಕಾರನ್ನು ನಿಲ್ಲಿಸಿದ್ದ ವೇಳೆ, ಕಾರಿಗೆ ಹಠಾತ್ ಬೆಂಕಿ ಹಿಡಿದು ಸಂಪೂರ್ಣವಾಗಿ ಹೊತ್ತಿ ಉರಿಯಿತು. ಪ್ರಾಥಮಿಕ ಮಾಹಿತಿ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ತಹಸೀಲ್ದಾರ್ ಗೀತಾ, ಪೊಲೀಸರು ಸಂಪೂರ್ಣ ತನಿಖೆ ನಡೆಸಬೇಕೆಂದು ದೂರು ನೀಡಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ, ಈ ಬೆಂಕಿ ಅವಘಡಕ್ಕೆ ಯಾವುದೇ ಕೌಟುಂಬಿಕ ಕಲಹ ಕೂಡ ಕಾರಣವಿದೆಯೇ ಎಂಬುದು ಸಹ ತನಿಖೆಯ ಭಾಗವಾಗಿದ್ದು, ಕಾರಿಗೆ ದುಷ್ಕೃತ್ಯವಾಗಿ ಬೆಂಕಿ ಹಚ್ಚಿರುವ ಶಂಕೆ ಕೂಡ ವ್ಯಕ್ತವಾಗಿದೆ.