ನವೆಂಬರ್, ಡಿಸೆಂಬರ್ 4: ಡಾಲರ್ ಎದುರು ರುಪಾಯಿ ಕರೆನ್ಸಿ ಮೌಲ್ಯ ಗುರುವಾರ 90.56ಕ್ಕೆ ಕುಸಿದಿತ್ತು. ಪ್ರತೀ ಡಾಲರ್ಗೆ ರುಪಾಯಿ ಮೌಲ್ಯ 90ರ ಗಡಿ ದಾಟಿದ್ದು ಇದೆ ಮೊದಲು. ದಿನದಿಂದ ದಿನಕ್ಕೆ ರೂಪಾಯಿ ಕರೆನ್ಸಿ ಮೌಲ್ಯ (ಡಾಲರ್ ವಿರುದ್ಧ ರೂಪಾಯಿ) ಕುಂದುತ್ತಲೇ ಇದೆ. ಕೆಲ ವರದಿಗಳ ಪ್ರಕಾರ ಈ ವರ್ಷ ಏಷ್ಯಾದ ಕರೆನ್ಸಿಗಳ ಮೇಲಿನ ರುಪಾಯಿಯದ್ದೇ ಅತ್ಯಂತ ಕಳಪೆ ಸಾಧನೆ. ಎಸ್ಬಿಐ ರಿಸರ್ಚ್ನ ವರದಿಯ ಪ್ರಕಾರ, ರುಪಾಯಿ ಮೌಲ್ಯ ಕಡಿಮೆ ಆಗುತ್ತಿದೆಯಾದರೂ, ಅದು ದುರ್ಬಲಗೊಂಡಿಲ್ಲ ಎಂದಿದೆ.
‘ರುಪಾಯಿ ಇಳಿಯುತ್ತಿದೆ ಎಂದರೆ ಅದು ದುರ್ಬಲ ಕರೆನ್ಸಿ ಎಂದೆನ್ನಿಸುತ್ತದೆ. ಆಂತರಿಕ ಶಕ್ತಿಯು ಬಾಹ್ಯ ಶಕ್ತಿಗಳನ್ನು ಪ್ರತಿರೋಧಿಸಬೇಕು. ರುಪಾಯಿ ದರ ಕುಸಿತದಿಂದ ಮಾರುಕಟ್ಟೆಯ ಭಾವನೆಗಳಿಗೆ ಘಾಸಿ ಆಗಬಹುದು. ಆದರೆ, ಕರೆನ್ಸಿ ನಿರ್ವಹಣೆಯು ಸೆಂಟ್ರಲ್ ಬ್ಯಾಂಕ್ ನ (RBI) ಜವಾಬ್ದಾರಿಯಲ್ಲ ಎಂಬುದೂ ಹೌದು,’ ಎಂದು ಎಸ್ ಬಿಐ ರಿಸರ್ಚ್ ತನ್ನ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: ಭಾರತದಲ್ಲಿ ಈ 3 ಬ್ಯಾಂಕುಗಳು ಅತೀ ಸುರಕ್ಷಿತವೆಂದು ಆರ್ ಬಿಐ ಘೋಷಣೆ; ಇವುಗಳಿಗೆ ವಿಶೇಷ ಮಾರ್ಗಸೂಚಿ
ಅತ್ಯಂತ ಕಡಿಮೆ ಪ್ರಕ್ಷುಬ್ದತೆಯ ಕರೆನ್ಸಿಗಳಲ್ಲಿ ರುಪಾಯಿ
ಭಾರತದ ಮೇಲೆ ಅಮೆರಿಕ ಶೇ 50ರಷ್ಟು ಟ್ಯಾರಿಫ್ ವಿಧಿಸಿರುವುದು ರುಪಾಯಿ ಮೌಲ್ಯ ಕುಸಿತಕ್ಕೆ ದೊಡ್ಡ ಕಾರಣ ಎಂಬುದು ಎಸ್ ಬಿಐ ಅಂದಾಜು. 2025ರ ಏಪ್ರಿಲ್ 2ರಂದು ಅಮೆರಿಕವು ಟ್ಯಾರಿಫ್ ವಿಧಿಸಿದಾಗಿನಿಂದ ಡಾಲರ್ ಎದುರು ರೂಪಾಯಿ ಶೇ. 5.5ರಷ್ಟು ಕುಸಿದಿದೆ. ಇದು ದೊಡ್ಡ ಆರ್ಥಿಕತೆಯ ಕರೆನ್ಸಿಗಳ ಮೇಲಕ್ಕೆ ಅತಿಹೆಚ್ಚು ಕುಸಿತ ಕಂಡಿರುವುದು ರುಪಾಯಿಯೇ. ಆದರೆ, ಈ ವರದಿಯ ಪ್ರಕಾರ, ಅತಿಹೆಚ್ಚು ಪ್ರಕ್ಷುಬ್ಧತೆಯ ಕರೆನ್ಸಿಗಳಲ್ಲಿ ರುಪಾಯಿ ಇಲ್ಲ.
ಏಪ್ರಿಲ್ 2 ರ ನಂತರ ರುಪಾಯಿ ಕರೆನ್ಸಿಯ ವೊಲಾಟಾಲಿಟಿ ಅಥವಾ ಪ್ರಕ್ಷುಬ್ದತೆ ಶೇ. 1.7 ಮಾತ್ರವೇ. ಚೀನಾ, ವಿಯೆಟ್ನಾಂ, ಇಂಡೋನೇಷ್ಯಾ, ಜಪಾನ್ ದೇಶಗಳು ಭಾರತದ ಮೇಲೆ ಅಧಿಕ ಟ್ಯಾರಿಫ್ ಹಾಕಿರುವುದು ರುಪಾಯಿ ಮೌಲ್ಯವು ಹೆಚ್ಚು ಪ್ರಭಾವ ಬೀರಿದೆ ಎಂಬುದು ಈ ವರದಿಯ ಅನಿಸಿಕೆ.
ಇದನ್ನೂ ಓದಿ: ಸಹಕಾರಿ ತತ್ವದಲ್ಲಿ ರಸ್ತೆಗಿಳಿದ ಭಾರತ್ ಟ್ಯಾಕ್ಸಿ; ರಾಪಿಡೋ, ಓಲಾ, ಊಬರ್ಗೆ ಪ್ರಬಲ ಪೈಪೋಟಿ
ಆರ್ಬಿಐ ರಿಪೋ ದರ ಕಡಿತಗೊಳಿಸಬಾರದು
ರುಪಾಯಿ ಮೌಲ್ಯ ಕುಸಿತಕ್ಕೆ ಪ್ರತಿಯಾಗಿ ಆರ್ಬಿಐ ತನ್ನ ಬಡ್ಡಿದರ ಇಳಿಸಬೇಕು ಎಂದು ಕೇಳಿಬರುತ್ತಿರುವ ವಾದವನ್ನು ಎಸ್ಬಿಐ ರಿಸರ್ಚ್ ತಂಡ ತಳ್ಳಿಹಾಕಿದೆ. ರುಪಾಯಿ ಕುಸತಕ್ಕೆ ಪ್ರತಿಯಾಗಿ ರಿಪೋ ದರ ಇಳಿಸಿದರೆ ಅದು ಅಪ್ರಸ್ತುತ ಎನಿಸುತ್ತದೆ. ಈ ಹಂತದಲ್ಲಿ ಬಡ್ಡಿ ದರ ಬದಲಾಗುವುದು ರೂಪಾಯಿಗೆ ಮಾರಕವೇ ಆಗುತ್ತದೆ ಎಂದು ಎಸ್ಬಿಐ ರಿಸರ್ಚ್ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ