40 ಲಕ್ಷ ಭಾರತೀಯರಿಂದ ವಿವಾಹೇತರ ಡೇಟಿಂಗ್ ಆ್ಯಪ್ ಬಳಕೆ; ಯಾವ ನಗರ ಟಾಪ್‌ನಲ್ಲಿದೆ ಗೆಸ್ ಮಾಡಿ?

40 ಲಕ್ಷ ಭಾರತೀಯರಿಂದ ವಿವಾಹೇತರ ಡೇಟಿಂಗ್ ಆ್ಯಪ್ ಬಳಕೆ; ಯಾವ ನಗರ ಟಾಪ್‌ನಲ್ಲಿದೆ ಗೆಸ್ ಮಾಡಿ?

40 ಲಕ್ಷ ಭಾರತೀಯರಿಂದ ವಿವಾಹೇತರ ಡೇಟಿಂಗ್ ಆ್ಯಪ್ ಬಳಕೆ; ಯಾವ ನಗರ ಟಾಪ್‌ನಲ್ಲಿದೆ ಗೆಸ್ ಮಾಡಿ?

Extra-marital dating India report: ಈ ಅಂಕಿಅಂಶಗಳ ಹಿಂದೆ ಹತ್ತಾರು ಅಚ್ಚರಿಯ ಸಂಗತಿಗಳಿದ್ದು, ಯಾವ ನಗರದವರು ಇದರಲ್ಲಿ ಅತಿ ಹೆಚ್ಚು ಸಕ್ರಿಯರಾಗಿದ್ದಾರೆ? ಮತ್ತು ಯಾವ ವಯಸ್ಸಿನವರು ಯಾರನ್ನು ಹುಡುಕುತ್ತಿದ್ದಾರೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮದುವೆ ಎಂಬುದು ಒಂದು ಪವಿತ್ರ ಬಂಧ ಎಂದು ನಂಬುವ ನಮ್ಮ ದೇಶದಲ್ಲಿ, ಈಗ ಸದ್ದಿಲ್ಲದೆ ಹೊಸದೊಂದು ಟ್ರೆಂಡ್ ಶುರುವಾಗಿದೆ. ಸಂಗಾತಿಯ ಜೊತೆಗಿನ ಸಂಬಂಧದ ಹೊರತಾಗಿ ಹೊಸ ಸ್ನೇಹ ಅಥವಾ ಗುಪ್ತ ಸಂಬಂಧವನ್ನು ಬಯಸುವವರಿಗಾಗಿಯೇ ಇರುವ ‘ಗ್ಲೀಡನ್’ (Gleeden) ಎಂಬ ಆ್ಯಪ್ ಬಳಕೆದಾರರ ಸಂಖ್ಯೆ ಭಾರತದಲ್ಲಿ ಬರೋಬ್ಬರಿ 40 ಲಕ್ಷ ದಾಟಿದೆ!

ಅಚ್ಚರಿಯ ವಿಷಯವೆಂದರೆ, ಈ ಪಟ್ಟಿಯಲ್ಲಿ ನಮ್ಮ ಬೆಂಗಳೂರಿಗರೇ ಮುಂದಿದ್ದಾರೆ. ಭಾರತದ ಪ್ರಮುಖ ನಗರಗಳ ಪೈಕಿ ನಮ್ಮ ಬೆಂಗಳೂರು ಈ ಸೀಕ್ರೆಟ್ ಡೇಟಿಂಗ್ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂಬುದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ತಂತ್ರಜ್ಞಾನದ ಹಬ್ ಆಗಿರುವ ಬೆಂಗಳೂರಿನಲ್ಲಿ ಕೆಲಸದ ಒತ್ತಡ ಮತ್ತು ಆಧುನಿಕ ಜೀವನಶೈಲಿಯ ನಡುವೆ, ಜನರು ಇಂತಹ ವೇದಿಕೆಗಳ ಮೂಲಕ ಹೊಸ ಸ್ನೇಹ ಅಥವಾ ಭಾವನಾತ್ಮಕ ಬೆಂಬಲವನ್ನು ಹುಡುಕುತ್ತಿದ್ದಾರೆ ಎಂದು ವರದಿ ಹೇಳುತ್ತಿದೆ.

ದೇಶದ ದೊಡ್ಡ ದೊಡ್ಡ ನಗರಗಳ ನಡುವೆ ಈ ಆ್ಯಪ್ ಬಳಕೆಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಒಟ್ಟು ಬಳಕೆದಾರರಲ್ಲಿ ಶೇ. 18ರಷ್ಟು ಜನರು ನಮ್ಮ ಸಿಟಿಯವರೇ ಆಗಿದ್ದಾರೆ. ಇದರ ನಂತರದ ಸ್ಥಾನದಲ್ಲಿ ಹೈದರಾಬಾದ್ (ಶೇ. 17) ಇದೆ. ಕೇವಲ ದೊಡ್ಡ ನಗರಗಳಷ್ಟೇ ಅಲ್ಲದೆ, ಈಗ ಸಣ್ಣ ನಗರಗಳಲ್ಲೂ ಈ ಆ್ಯಪ್ ಹಾವಳಿ ಹೆಚ್ಚುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಈ ಆ್ಯಪ್ ಸೇರುತ್ತಿರುವ ಮಹಿಳೆಯರ ಸಂಖ್ಯೆ ಶೇ. 148ರಷ್ಟು ಹೆಚ್ಚಾಗಿದೆ. ಇದು ಆಧುನಿಕ ಜಗತ್ತಿನಲ್ಲಿ ಮಹಿಳೆಯರ ಬದಲಾಗುತ್ತಿರುವ ಆಲೋಚನೆ ಮತ್ತು ಸ್ವತಂತ್ರ ನಿರ್ಧಾರಗಳನ್ನು ತೋರಿಸುತ್ತದೆ ಎಂದು ಆ್ಯಪ್ ಸಂಸ್ಥೆ ಹೇಳುತ್ತಿದೆ.

ಜನರು ಈ ಆ್ಯಪ್ ಅನ್ನು ಯಾವಾಗ ಬಳಸುತ್ತಾರೆ ಗೊತ್ತಾ? ಹೆಚ್ಚಿನವರು ಕೆಲಸದ ನಡುವೆ ಸಿಗುವ ಮಧ್ಯಾಹ್ನ 12 ರಿಂದ 3 ಗಂಟೆಯ ಬಿಡುವಿನ ಸಮಯದಲ್ಲಿ ಅಥವಾ ರಾತ್ರಿ 10 ಗಂಟೆಯ ನಂತರ ಚಾಟಿಂಗ್ ಮಾಡುತ್ತಾರೆ. ಅಂದರೆ, ಮನೆಯಲ್ಲಿ ಅಥವಾ ಆಫೀಸಿನಲ್ಲಿ ಸ್ವಲ್ಪ ಏಕಾಂತ ಸಿಕ್ಕಾಗ ಈ ಗುಪ್ತ ಸಂಭಾಷಣೆ ನಡೆಯುತ್ತದೆ.

ಪುರುಷರು:ಸಾಮಾನ್ಯವಾಗಿ 25 ರಿಂದ 30 ವರ್ಷದ ಒಳಗಿನ ಹುಡುಗಿಯರ ಅಥವಾ ಮಹಿಳೆಯರ ಸ್ನೇಹ ಬಯಸುತ್ತಾರೆ.ಮಹಿಳೆಯರು: ಇವರು ಹೆಚ್ಚಾಗಿ 30 ರಿಂದ 40 ವರ್ಷದ ಪುರುಷರನ್ನು ಇಷ್ಟಪಡುತ್ತಾರೆ. ಅದರಲ್ಲೂ ಸಮಾಜದಲ್ಲಿ ಗೌರವವಿರುವ ಡಾಕ್ಟರ್‌ಗಳು, ಇಂಜಿನಿಯರ್‌ಗಳು ಅಥವಾ ದೊಡ್ಡ ಅಧಿಕಾರಿಗಳ ಜೊತೆ ಸ್ನೇಹ ಬೆಳೆಸಲು ಮಹಿಳೆಯರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

ಸಂಬಂಧಗಳ ವಿಚಾರದಲ್ಲಿ ಡಿಜಿಟಲ್ ಲೋಕವು ಹೊಸ ದಾರಿಗಳನ್ನು ಸೃಷ್ಟಿಸುತ್ತಿದೆ. ಮದುವೆಯ ನಂತರವೂ ಜನರು ಹೊಸ ಸ್ನೇಹ ಅಥವಾ ಭಾವನಾತ್ಮಕ ಬೆಂಬಲಕ್ಕಾಗಿ ಇಂತಹ ವೇದಿಕೆಗಳನ್ನು ಹುಡುಕುತ್ತಿರುವುದು ನಮ್ಮ ಸಾಮಾಜಿಕ ಬದಲಾವಣೆಯ ಮುನ್ಸೂಚನೆಯಾಗಿದೆ.

Source link

Leave a Reply

Your email address will not be published. Required fields are marked *