5 ಬಾರಿ ಗುಂಡೇಟು ತಿಂದು ರಕ್ತ ಸುರಿಯುತ್ತಿದ್ದರೂ ಕಾರು ಚಲಾಯಿಸಿಕೊಂಡು 25 ಕಿ.ಮೀ. ದೂರದ ಆಸ್ಪತ್ರೆ ತಲುಪಿದ ವ್ಯಕ್ತಿ!
ಗಾಜಿಯಾಬಾದ್, ಏಪ್ರಿಲ್ 4: ವಂಚನೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ 35 ವರ್ಷದ ವ್ಯಕ್ತಿಯ ಮೇಲೆ ಗುರುವಾರ (ಏಪ್ರಿಲ್ 2) ರಾತ್ರಿ ಗಾಜಿಯಾಬಾದ್ನ ಮೋದಿನಗರದಲ್ಲಿರುವ ರಸ್ತೆಬದಿಯ ಡಾಬಾ ಹೊರಗೆ 5 ಬಾರಿ ಗುಂಡು (ಶೂಟ್ಔಟ್) ಹಾರಿಸಲಾಯಿತು. ಇದರಿಂದ ತೀವ್ರ ರಕ್ತಸ್ರಾವವಾಗಿತ್ತು. ಅಷ್ಟಾದರೂ ಆ ವ್ಯಕ್ತಿ ತಾವೇ ಕಾರು ಚಲಾಯಿಸಿಕೊಂಡು ಹೋಗಿ 25 ಕಿ.ಮೀ ದೂರ ಆಸ್ಪತ್ರೆಗೆ ದಾಖಲಾಗಿದ್ದಾರೆ. 35 ವರ್ಷದ ರಾಹುಲ್ ಚೌಧರಿ 25 ಕಿ.ಮೀ.ಗಿಂತ ದೂರದ ಆಸ್ಪತ್ರೆಗೆ ತಲುಪುವಲ್ಲಿ ಯಶಸ್ವಿಯಾದರು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು….