‘ಧುರಂಧರ್’ ಚಿತ್ರಕ್ಕೆ ಕೃತಿಚೌರ್ಯ ಆರೋಪದ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿಸಿದ್ರಾ ಆದಿತ್ಯ ಧರ್? ಸತ್ಯ ಸಂಗತಿ ಏನು? | Director Aditya Dhar Is Heading For A Legal Battle Against Santhosh Kumar Who Accused The Dhurandhar Of Plagiarism
ಬಾಕ್ಸ್ ಆಫೀಸ್ನಲ್ಲಿ ಮಿನುಗುತ್ತಿರುವ ‘ಧುರಂಧರ್’ ಚಿತ್ರಕ್ಕೆ ಈ ಕಾನೂನು ಸಮರವು ಹೊಸ ತಲೆನೋವಾಗಿ ಪರಿಣಮಿಸಿದೆ. ರಣವೀರ್ ಸಿಂಗ್ ಅವರ ಅಪ್ಪಟ ಅಭಿಮಾನಿಗಳು ಈ ವಿವಾದ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಎಂದು ಆತಂಕದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಈ ‘ಕಥೆಯ ಕದನ’ ಬಾಲಿವುಡ್ನ ಹಾಟ್ ಟಾಪಿಕ್ ಆಗಿದೆ. ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ‘ಧುರಂಧರ್’ ಚಿತ್ರಕ್ಕೆ ಕೃತಿಚೌರ್ಯದ ಕಂಟಕ! ಬಾಲಿವುಡ್ನಲ್ಲಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ಬರೆದಿರುವ ರಣವೀರ್ ಸಿಂಗ್ (Ranveer Singh) ಅಭಿನಯದ ‘ಧುರಂಧರ್: ದಿ ರಿವೆಂಜ್’ ಸಿನಿಮಾ…