Mantralayam Goshala Short Circuit Sparks | ಮಂತ್ರಾಲಯ ಗೋಶಾಲೆಗೆ ಬೆಂಕಿ; ಹೊತ್ತಿ ಉರಿದ ಹುಲ್ಲಿನ ಬಣವೆಗಳು! | Fire Accident At Mantralayam Goshala Short Circuit Sparks Blaze
ಮಂತ್ರಾಲಯದ ರಾಯರ ಮಠದ ಗೋಶಾಲೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ. ಮೇವಿನ ಬಣಿವೆಗಳು ಭಸ್ಮವಾಗಿದ್ದು, ಯಾವುದೇ ಜಾನುವಾರುಗಳಿಗೆ ಹಾನಿಯಾಗಿಲ್ಲ. ರಾಯಚೂರು (ಆ.12): ಮಂತ್ರಾಲಯದ ಪ್ರಸಿದ್ಧ ರಾಯರ ಮಠದ ಗೋಶಾಲೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ. ಗೋಶಾಲೆಯಲ್ಲಿ ಸಂಗ್ರಹಿಸಿಡಲಾಗಿದ್ದ ಕೆಲವು ಮೇವಿನ ಬಣಿವೆಗಳು ಹೊತ್ತಿ ಉರಿದು ಭಸ್ಮವಾಗಿವೆ. ನೂರಾರು ಹಸುಗಳಿರುವ ಈ ಗೋಶಾಲೆಯಲ್ಲಿ ಘಟನೆ ಸಂಭವಿಸಿದ್ದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿತ್ತು. ಅದೃಷ್ಟವಶಾತ್, ಯಾವುದೇ ಗೋವುಗಳಿಗೆ ಪ್ರಾಣಹಾನಿಯಾಗಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ, ಗೋಶಾಲೆಯ ವಿದ್ಯುತ್ ವ್ಯವಸ್ಥೆಯಲ್ಲಿ…