ರಿವರ್ಸ್ ವೇಳೆ ಹೊಟೇಲ್ ಲಾಬಿಗೆ ಕಾರು ನುಗ್ಗಿಸಿದ ಮಹಿಳೆ: ಹೋರಿಗಳ ಕಾದಾಟಕ್ಕೆ ಚಿಂದಿಯಾದ ಟೀ ಶಾಪ್: ವೈರಲ್ ವೀಡಿಯೋ | Woman Crashes Car Into Hotel Lobby Tea Shop Destroyed By Bullfightviral Video
ರಾಯ್ಬರೇಲಿಯಲ್ಲಿ ಮಹಿಳಾ ವಕೀಲರೊಬ್ಬರು ಕಾರನ್ನು ರಿವರ್ಸ್ ಮಾಡುವಾಗ ಹೊಟೇಲ್ ಲಾಬಿಗೆ ನುಗ್ಗಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ, ಬೀದಿ ಹೋರಿಗಳ ಕಾದಾಟದಿಂದ ಟೀ ಅಂಗಡಿ ಧ್ವಂಸಗೊಂಡಿದೆ. ಮಹಿಳೆಯೊಬ್ಬರು ತಮ್ಮ ಕಾರನ್ನು ರಿವರ್ಸ್ ಮಾಡುವುದಕ್ಕೆ ಹೋಗಿ ಸೀದಾ ಹೊಟೇಲ್ ಲಾಬಿಯೊಳಗೆ ನುಗ್ಗಿಸಿದ್ದು, ಅಲ್ಲಿ ನಿಂತಿದ್ದವರು ಕೂದಲೆಳೆ ಅಂತರದಿಂದ ದೊಡ್ಡ ಅವಘಡದಿಂದ ಪಾರಾಗಿದ್ದಾರೆ. ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳಾ ವಕೀಲರೊಬ್ಬರು ತಮ್ಮ…