ಕಬ್ಬನ್ ಪಾರ್ಕ್‌ನಲ್ಲಿ 18 ವರ್ಷ ಮೇಲ್ಪಟ್ಟವರಿಗೆ 199 ರೂ.ಗೆ ಬ್ಲೈಂಡ್ ಡೇಟಿಂಗ್ ಆಯೋಜನೆ! | Cubbon Park Blind Dating Controversy No Govt Permission For Dating Event Sat
ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಕೇವಲ 199 ರೂ.ಗೆ ಯುವಕ-ಯುವತಿಯರಿಗೆ ‘ಬ್ಲೈಂಡ್ ಡೇಟ್’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರ ಬುಕಿಂಗ್ ಕೂಡ ಆರಂಭವಾಗಿದೆ. ಇದಕ್ಕೆ ಸ್ಥಳೀಯ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ತೋಟಗಾರಿಕಾ ಇಲಾಖೆ ಯಾವುದೇ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಬೆಂಗಳೂರು (ಆ.1): ನಗರದ ಹೃದಯಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಕಬ್ಬನ್ ಪಾರ್ಕ್ ಈಗ ಡೇಟಿಂಗ್ ವೇದಿಕೆಯಾಗಿ ಪರಿವರ್ತನೆಯಾಗುತ್ತದಾ ಎಂಬ ಪ್ರಶ್ನೆ ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆ.2ರಿಂದ ಆ.31ರವರೆಗೆ ಕಬ್ಬನ್ ಪಾರ್ಕ್ ನಲ್ಲಿ ‘ಬ್ಲೈಂಡ್ ಡೇಟ್’ ಕಾರ್ಯಕ್ರಮ ಆಯೋಜನೆಯಾಗಿದೆ…