ನಾಡು ಕಂಡ ಅಪರೂಪದ ಸಮಾಜ ಸುಧಾರಕಿ, ತೆರೆಮೆರೆ ಸಾಧಕಿ ಪ್ರಮಿಳಾ ತಾಯಿ ಮೇಧೆ ನಿಧನ: ದೇಹ ದಾನ | Vandaneeya Pramukh Sanchalika Of Rss Pramila Tai Medhe Death Suc
ಜೀವನದ ಉದ್ದಕ್ಕೂ ಸಮಾಜದ ಉದ್ಧಾರಕ್ಕಾಗಿ, ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿ ತೆರೆಮರೆಯಲ್ಲಿಯೇ ಉಳಿದ ರಾಷ್ಟ್ರ ಸೇವಿಕಾ ಸಮಿತಿಯ ಮಾಜಿ ಪ್ರಮುಖ ಸಂಚಾಲಿಕಾ ಪ್ರಮಿಳಾ ತಾಯಿ ಮೇಧೆ ನಿಧನರಾಗಿದ್ದಾರೆ. ಅವರ ಬಗ್ಗೆ ಒಂದಿಷ್ಟು ಮಾಹಿತಿ… ಕೆಲವರ ಜೀವನವೇ ಹಾಗೆ, ಎಲೆ ಮರೆಯ ಕಾಯಿಯಂತೆ. ಇತರರ ಕಲ್ಯಾಣಕ್ಕಾಗಿ, ಸಮಾಜದ ಉದ್ಧಾರಕ್ಕಾಗಿ ಅಥವಾ ದೇಶಕ್ಕಾಗಿ ಜೀವನ ಮುಡುಪಾಗಿ ಇಡುವ ಸಾಧಕರು ಎಷ್ಟೋ ಮಂದಿ ಇದ್ದರೂ ಅವರು ಸಾರ್ವಜನಿಕರಿಗೆ ತಿಳಿದೇ ಇರುವುದಿಲ್ಲ. ತೆರೆಯ ಮರೆಯಲ್ಲಿ ಇದ್ದುಕೊಂಡೇ ಅವರು ಬದುಕು ಸಾಗಿಸುತ್ತಿರುತ್ತಾರೆ. ಅವರ ಬಗ್ಗೆ ಏನಾದರೂ…