ಫ್ರೀಯಾಗಿ ಕೈಗೆ ಸಿಕ್ಕಷ್ಟು ಸೇಬುಹಣ್ಣು ಎತ್ತಿಕೊಂಡು ಹೋದ ಜನ; ಲಾರಿ ಬಿದ್ದಿದ್ದೇ ಇವರಿಗೆ ಹಬ್ಬವಾಯ್ತು!
ಶಿರಾ ತಾಲೂಕಿನಲ್ಲಿ ಸೇಬು ತುಂಬಿದ ಲಾರಿ ಪಲ್ಟಿಯಾಗಿ, ರಸ್ತೆಗೆ ಚೆಲ್ಲಾಪಿಲ್ಲಿಯಾದ ಹಣ್ಣುಗಳನ್ನು ಜನರು ಉಚಿತವಾಗಿ ಎತ್ತಿಕೊಂಡು ಹೋದ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೇಬುಗಳು ಹಾನಿಗೊಳಗಾಗಿವೆ.<img><p><strong>ತುಮಕೂರು (ಜು.31): </strong>ಉತ್ತರ ಭಾರತದಿಂದ ಆ್ಯಪಲ್ (ಸೇಬು ಹಣ್ಣು) ತುಂಬಿಕೊಂಡು ಬೆಂಗಳೂರಿಗೆ ಬರುತ್ತಿದ್ದ ವೇಳೆ ಲಾರಿ ಪಲ್ಟಿಯಾಗಿ ಉರುಳಿ ಬಿದ್ದಿದೆ. ಲಕ್ಷಾಂತರ ಬೆಲೆಬಾಳುವ ಸೇಬು ಹಣ್ಣುಗಳು ರಸ್ತೆಗೆ ಬಿದ್ದಿದ್ದು, ಜನರು ತಮಗೆ ಕೈಗೆ ಸಿಕ್ಕಷ್ಟು, ಎತ್ತಿಕೊಂಡು ಹೋಗಲು ಸಾಧ್ಯವಾಗುವಷ್ಟು ಸೇಬು ಹಣ್ಣುಗಳನ್ನು…