ಸಂಖ್ಯಾಶಾಸ್ತ್ರ ಆಗಸ್ಟ್ 2025 ಮಾಸ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಈ ತಿಂಗಳ ಭವಿಷ್ಯ ಇಲ್ಲಿದೆ
ಸಂಖ್ಯಾಶಾಸ್ತ್ರ ಆಗಸ್ಟ್ 2025 ಮಾಸಭವಿಷ್ಯ ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ನೀವು ಅಂದುಕೊಳ್ಳದೆ ಇರುವ ಕೆಲವು ಖರ್ಚುಗಳು ಎದ್ದು ನಿಲ್ಲಲಿವೆ. ಕುಟುಂಬದ ಒಳಗಿನ ಕೆಲವು ಸಂಗತಿಗಳನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ಸರಿಯಾದ ಯೋಜನೆ ಹಾಗೂ ಯೋಚನೆ ಇರುವುದು ತುಂಬ ಮುಖ್ಯವಾಗಿರುತ್ತದೆ. ಮೊದಲಿನ ಹಾಗೆ ಎಲ್ಲವೂ ನಿಮ್ಮ ಪರವಾಗಿಯೇ ಇದೆ ಎಂಬ ಏಕಪಕ್ಷೀಯವಾದ ತೀರ್ಮಾನಕ್ಕೆ ಬರುವುದು ಬೇಡ. ವಿದ್ಯಾರ್ಥಿಗಳು ಪ್ರಮುಖವಾದ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಹೊಸ ಕೋರ್ಸ್,…