ಹೊಸ ಪಾತ್ರೆಯ ಮೇಲಿನ ಸ್ಟಿಕ್ಕರ್ ಹೋಗ್ತಿಲ್ಲಾ ಅಂತ ತಲೆನೋವಾ? ಒಮ್ಮೆ ಈ ಟಿಪ್ಸ್ ಫಾಲೋ ಮಾಡಿ ನೋಡಿ | Are You Worried The Sticker On Your New Container Wont Come Off Try These Tips
ಹೊಸ ಪಾತ್ರೆಗಳ ಮೇಲಿರುವ ಸ್ಟಿಕ್ಕರ್‌ಗಳನ್ನು ತೆಗೆಯುವುದು ತಲೆನೋವು. ಬೇಕಿಂಗ್ ಸೋಡಾ, ಬಿಸಿನೀರು, ಹೇರ್ ಡ್ರೈಯರ್, ವಿನೆಗರ್, ನಿಂಬೆರಸದಂತಹ ಮನೆಮದ್ದುಗಳಿಂದ ಸುಲಭವಾಗಿ ಸ್ಟಿಕ್ಕರ್‌ಗಳನ್ನು ತೆಗೆಯಬಹುದು. ಹೊಸ ಗ್ಲಾಸ್ ಬಾಟಲಿಗಳು(Glass bottles), ಪ್ಲಾಸ್ಟಿಕ್ ಡಬ್ಬಗಳು(Plastic Cans) ಅಥವಾ ಟಿಫಿನ್ ಬಾಕ್ಸ್(Tiffin Box) ಖರೀದಿಸಿದಾಗ ಅವುಗಳ ಮೇಲಿದ್ದ ಸ್ಟಿಕ್ಕರ್‌ಗಳನ್ನು ತೆಗೆದುಹಾಕುವುದು ತಲೆ ಬಿಸಿ ಕೆಲಸವಾಗಿರುತ್ತದೆ. ವಿಶೇಷವಾಗಿ ರೇಟ್ ಟ್ಯಾಗ್(Rate tag)ಗಳನ್ನು ತುಂಬಾ ಬಿಗಿಯಾಗಿ ಅಂಟಿಸಲಾಗಿರುವುದರಿಂದ, ತೆಗೆದುಹಾಕುವಾಗ ಪಾತ್ರೆಯ ಮೇಲೆ ಅಂಟುಬಿದ್ದ ಕಲೆಗಳು ಹಾಗೇ ಉಳಿದುಬಿಡುತ್ತವೆ. ಕೆಲವೊಮ್ಮೆ ಈ ಸ್ಟಿಕ್ಕರ್‌ಗಳನ್ನು ತೆಗೆಯುವಾಗ ಬಾಕ್ಸ್…