ಒಂದೇ ಒಂದು ದಿನ ಚಂದ್ರ ಕಾಣಿಸೋಲ್ಲ ಅಂದ್ರೆ ಏನೇನಾಗಬಹುದು? ಎಂದಾದ್ರೂ ಈ ಬಗ್ಗೆ ಯೋಚಿಸಿದ್ದೀರಾ ? | What Would Happen On Earth If The Moon Disappeared
ಚಂದ್ರ ಗ್ರಹದ ಜೊತೆ ನಮ್ಮ ಸಂಬಂಧ ಆಳವಾಗಿದೆ. ಒಂದ್ವೇಳೆ ಚಂದ್ರ ಕಣ್ಮರೆಯಾದ್ರೆ ಭೂಮಿ ಏನೆಲ್ಲ ತೊಂದ್ರೆ ಅನುಭವಿಸಬಹುದು? ಇದ್ರ ಮಾಹಿತಿ ಇಲ್ಲಿದೆ. ಚಂದ್ರ, ಕತ್ತಲೆಯಲ್ಲಿ ಬೆಳಕು ನೀಡುವ ಗ್ರಹ. ಕವಿಗಳಿಗೆ ಸೌಂದರ್ಯ ವರ್ಣಿಸುವ ವಸ್ತು. ಮಕ್ಕಳ ಆಟಿಕೆ. ಒಟ್ಟಾರೆ ಎಲ್ಲರ ಅಚ್ಚುಮೆಚ್ಚು ಚಂದ್ರ. ಈ ಚಂದ್ರ 4.5 ಶತಕೋಟಿ ವರ್ಷಗಳಿಗೂ ಹೆಚ್ಚು ಕಾಲ ಸೂರ್ಯನ ಸುತ್ತ ಭೂಮಿಯೊಂದಿಗೆ ಸುತ್ತುತ್ತಿದೆ. ಮಂಗಳ ಗಾತ್ರದ ವಸ್ತುವೊಂದು ಭೂಮಿಗೆ ಡಿಕ್ಕಿ ಹೊಡೆದಾಗ ಚಂದ್ರ ಹುಟ್ಟಿಕೊಂಡಿತು ಎಂದು ತಜ್ಞರು ನಂಬುತ್ತಾರೆ. ನಾವು ಚಂದ್ರನ…