Meghana Raj marriage: ಮರು ವಿವಾಹದ ಬಗ್ಗೆ ಮೌನ ಮುರಿದ ನಟಿ ಮೇಘನಾ ರಾಜ್ ಹೇಳಿದ್ದೇನು?
<p>ಪತಿ ಚಿರು ಸರ್ಜಾ ಅವರು ಅಗಲಿ ಐದು ವರ್ಷಗಳಾಗಿದ್ದ, ನಟಿ ಮೇಘನಾ ರಾಜ್ ಮತ್ತೊಂದು ಮದುವೆಯಾಗಬೇಕು ಎನ್ನುವುದು ಅವರ ಅಸಂಖ್ಯ ಅಭಿಮಾನಿಗಳ ಮಾತು. ಅದರ ಬಗ್ಗೆ ನಟಿ ಏನು ಹೇಳಿದ್ದಾರೆ?</p><p> </p><img><p>ನಟಿ ಮೇಘನಾ ರಾಜ್ ಸದ್ಯ ಮಗನ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಚಿತ್ರದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ಮಗ ರಾಯನ್ ಸರ್ಜಾ ಹೊಟ್ಟೆಯಲ್ಲಿ ಇರುವಾಗಲೇ ಮೇಘನಾ ಅವರು ಪತಿ ಚಿರು ಸರ್ಜಾ ಅವರನ್ನು ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದದ್ದೇ.</p><img><p>ಅವರು ಅಗಲಿದ ಮೇಲೆ ಕುಟುಂಬಕ್ಕೆ ಬೆಳಕಾಗಿ ಬಂದಿದ್ದು ರಾಯನ್. ಮೇಘನಾ ಹೊಟ್ಟೆಯಲ್ಲಿ…