ಐಎಸ್‌ಎಲ್ ಅತಂತ್ರ: ಆಟಗಾರರ ವೇತನವನ್ನು ತಡೆಹಿಡಿದ ಬಿಎಫ್‌ಸಿ! ಸುನಿಲ್ ಚೆಟ್ರಿಗೂ ಸಿಗಲ್ಲ ಸ್ಯಾಲರಿ | Isl Future Uncertain Bengaluru Fc Suspends Player Salaries Amid Crisis Kvn
ಐಎಸ್‌ಎಲ್ ಭವಿಷ್ಯ ಅತಂತ್ರವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಎಫ್‌ಸಿ ತನ್ನ ಆಟಗಾರರ ವೇತನವನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿದಿದೆ. ಸುನಿಲ್ ಚೆಟ್ರಿ ಸೇರಿದಂತೆ ಬಿಎಫ್‌ಸಿಯ ಆಟಗಾರರಿಗೆ ಈ ಋತುವಿನಲ್ಲಿ ವೇತನ ಸಿಗುವುದಿಲ್ಲ. ನವದೆಹಲಿ: ರಿಲಯನ್ಸ್ ಒಡೆತನದ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್(ಎಫ್‌ಎಸ್‌ಡಿಎಲ್) ಮತ್ತು ಅಖಿಲ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಬಿಕ್ಕಟ್ಟಿನಿಂದಾಗಿ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಭವಿಷ್ಯ ಅತಂತ್ರವಾಗಿದೆ. ಈ ನಡುವೆ ಬೆಂಗಳೂರು ಎಫ್‌ಸಿ ತನ್ನ ಆಟಗಾರರ ವೇತನವನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿದಿದೆ. ಹೀಗಾಗಿ ಸುನಿಲ್ ಚೆಟ್ರಿ ಸೇರಿದಂತೆ ಬಿಎಫ್‌ಸಿಯ ಆಟಗಾರರಿಗೆ ಈ ಋತುವಿನಲ್ಲಿ…