ಕೇಂದ್ರದಿಂದ ರಾಜ್ಯಕ್ಕೆ ಕೊಟ್ಟ ಯೂರಿಯಾ ಗೊಬ್ಬರ ಕೇರಳಕ್ಕೆ ಕಳಿಸಿದ ಸರ್ಕಾರಿ ಗೋದಾಮು; ರಾಜ್ಯ ರೈತರಿಗೆ ಪಂಗನಾಮ!
ನಂಜನಗೂಡಿನ ಗೋದಾಮಿನಿಂದ ಕೇರಳಕ್ಕೆ ಯೂರಿಯಾ ಗೊಬ್ಬರ ಕಳ್ಳಸಾಗಣೆ ಪ್ರಕರಣ ಬೆಳಕಿಗೆ. ಚೆಕ್ ಪೋಸ್ಟ್‌ನಲ್ಲಿ 15 ಟನ್ ಗೊಬ್ಬರ ವಶ. ಅಂತರರಾಜ್ಯ ಸಾಗಾಟ ನಿಷೇಧದ ನಡುವೆಯೂ ಅಕ್ರಮ ಸಾಗಾಟ ನಡೆದಿರುವುದು ತೀವ್ರ ಚರ್ಚೆಗೆ ಗ್ರಾಸ.<img><p>ರಾಜ್ಯದಲ್ಲಿ ಗೊಬ್ಬರಕ್ಕಾಗಿ ರೈತರು ಸಾಲು ಸಾಲು ನಿಂತು ಪರದಾಡುತ್ತಿರುವ ಸಂದರ್ಭದಲ್ಲಿ, ನಂಜನಗೂಡಿನ ಗೋದಾಮಿನಿಂದ ಕೇರಳಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೃಷಿ ಇಲಾಖೆ ಮತ್ತು ಪೊಲೀಸರ ಜಂಟಿ ದಾಳಿಯಲ್ಲಿ ಸುಮಾರು 15 ಟನ್ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ.</p><img><p>ಈ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ…