5 ಹುಲಿಗಳ ಸಾವಿನ ಸುತ್ತ ಹಸು…ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಚಾಮರಾಜನಗರ, (ಜೂನ್ 26): ದೇಶದಲ್ಲಿ ಅತಿಹೆಚ್ಚು ಹುಲಿಗಳಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 2022ರ ಹುಲಿ ಗಣತಿ ಪ್ರಕಾರ ರಾಜ್ಯದಲ್ಲಿ 563 ಹುಲಿಗಳಿವೆ. ಅದರಲ್ಲೂ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ಅರಣ್ಯದಲ್ಲೇ 150 ಹುಲಿಗಳಿವೆ. ಇದೀಗ ಹುಲಿಗಳ ಜಿಲ್ಲೆ ಆಗಿರುವ ಚಾಮರಾಜನಗರದಲ್ಲಿ ಐದು ಹುಲಿಗಳ ಸಂಶಯಾಸ್ಪದವಾಗಿ ಸಾವನ್ನಪ್ಪಿವೆ. ಮೀಣ್ಯಂ ಅರಣ್ಯದಲ್ಲಿ ತಾಯಿ ಹುಲಿ ಮತ್ತು 4 ಮರಿಗಳ ಅಸಹಜ ಸಾವನ್ನಪ್ಪಿವೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹುಲಿಗಳ ಮರಣೋತ್ತರ…