ಒಂದೇ ತಂಡದ ಪರ ಆಡಿದ್ದಲ್ಲದೆ ಪಾಕ್ ಆಟಗಾರನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಇಶಾನ್ ಕಿಶನ್; ಫೋಟೋ ವೈರಲ್
ಹಲವಾರು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ (India- Pakistan) ನಡುವಿನ ರಾಜತಾಂತ್ರಿಕ ಸಂಬಂಧಗಳು ಮುರಿದುಬಿದ್ದಿದ್ದವು. ಆದರೆ ಏಪ್ರಿಲ್ 23 ರಂದು, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ (Pahalgam attack) 26 ಪ್ರವಾಸಿಗರನ್ನು ಕೊಂದ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಆ ಬಳಿಕ ಪಾಕಿಸ್ತಾನದ ವಿರುದ್ಧ ಪ್ರತಿಕಾರಕ್ಕಿಳಿದಿದ್ದ ಭಾರತ, ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿತ್ತು. ಭಾರತದ ದಾಳಿಗೆ ನಲುಗಿ ಹೋಗಿದ್ದ ಪಾಕಿಸ್ತಾನ ಕದನ ವಿರಾಮಕ್ಕೆ ಬೇಡಿಕೆ ಇಟ್ಟಿತು. ಆ ಬಳಿಕ ಉಭಯ ದೇಶಗಳ ನಡುವೆ ಯಾವುದೇ ರೀತಿಯ ವ್ಯಾಪಾರ…