ಮಣ್ಣೆತ್ತಿನ ಅಮಾವಾಸ್ಯೆ ದಿನವೇ ರೈತನ ಎತ್ತುಗಳನ್ನು ಹೊತ್ತೊಯ್ದ ಸಾಲ ನೀಡಿದವ
ರಾಯಚೂರು, ಜೂನ್ 25: ಸಾಲ ಕಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೋರ್ವ ಮಣ್ಣೆತ್ತಿನ ಅಮಾವಾಸ್ಯೆ (Mannettina Amavasye) ದಿನವೇ ರೈತ ದಂಪತಿಯ ಎತ್ತುಗಳನ್ನು ಹೊಡೆದುಕೊಂಡು ಹೋಗಿದ್ದಾನೆ. ರಾಯಚೂರು (Raichur) ಜಿಲ್ಲೆಯ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಮಸರಕಲ್ ಗ್ರಾಮದ ಮರಿಯಪ್ಪ ಹಾಗೂ ಮರಿಯಮ್ಮ ದಂಪತಿ ಕೃಷಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ರೈತ ದಂಪತಿ ಬಿತ್ತನೆ ಕಾರ್ಯ ಆರಂಭಿಸುವ ತವಕದಲ್ಲಿದ್ದರು. ಆದರೆ, ಸಾಲ ತೀರಿಸಿಲ್ಲ ಅಂತ ಜಯಪ್ಪ ಎಂಬುವರು ಈ ರೈತ…