ಎರಡೂ ದೇಶಗಳಿಂದ ಕದನವಿರಾಮ ಉಲ್ಲಂಘನೆ; ಇರಾನ್ ಮೇಲೆ ಬಾಂಬ್ ದಾಳಿ ನಡೆಸದಂತೆ ಇಸ್ರೇಲ್‌ಗೆ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್, ಜೂನ್ 24: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ದಿಟ್ಟ ಮತ್ತು ನೇರ ಸಂದೇಶ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ TRUTH ಮೂಲಕ ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್ ಮೇಲೆ ಯಾವುದೇ ವೈಮಾನಿಕ ದಾಳಿ ನಡೆಸದಂತೆ ಅವರು ಇಸ್ರೇಲ್ ಸರ್ಕಾರವನ್ನು ಎಚ್ಚರಿಸಿದ್ದಾರೆ. ಅಂತಹ ಕೃತ್ಯವನ್ನು ಕದನವಿರಾಮದ “ಪ್ರಮುಖ ಉಲ್ಲಂಘನೆ” ಎಂದು ಕರೆದಿದ್ದಾರೆ. “ನೀವು ಹಾಗೆ ಮಾಡಿದರೆ, ಅದು ಪ್ರಮುಖ ಉಲ್ಲಂಘನೆಯಾಗಲಿದೆ. ನಿಮ್ಮ ಪೈಲಟ್‌ಗಳನ್ನು ಈಗಲೇ ವಾಪಾಸ್…