ಏರ್ ಇಂಡಿಯಾ ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥ, ಊಟದಲ್ಲಿ ವಿಷದ ಶಂಕೆ
ಈ ಏರ್ ಇಂಡಿಯಾ ವಿಮಾನಕ್ಕೆ (Air India flight) ಯಾರೋದೋ ಶಾಪ ಇದೆ ಅಥವಾ ದೃಷ್ಟಿಯಾಗಿರಬೇಕು. ಒಂದಲ್ಲ ಒಂದು ಸಮಸ್ಯೆಗಳು ಈ ವಿಮಾನದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೀಗ ಈ ವಿಮಾನ ಊಟದ ವಿಚಾರವಾಗಿ ಸದ್ದು ಮಾಡುತ್ತಿದೆ. ಸೋಮವಾರ ಲಂಡನ್‌ನಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ಏರ್ ಇಂಡಿಯಾ ವಿಮಾನ AI 130ರಲ್ಲಿ ಹಲವು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಕೆಲವರಿಗೆ ವಾಕರಿಕೆ ಮತ್ತು ತಲೆತಿರುಗುವಿಕೆ ಸೇರಿದಂತೆ…