ಕ್ಯಾನ್ಸರ್ನಿಂದ ಬಳಲ್ತಿರುವವರಿಗೆ ಗುಡ್ ನ್ಯೂಸ್ ಕೊಟ್ಟ ನಟ! ಇಂಥ ಒಳ್ಳೆಯನತಕ್ಕೆ ಜೈ ಬಾಲಯ್ಯ ಎಂದ ಜನರು | Actor Nandamuri Balakrishna Balakrishna Announces 1000 Bed Cancer Hospital In Amaravati
ಅಮರಾವತಿಯಲ್ಲಿ ಹೊಸದಾಗಿ ಸಾವಿರ ಹಾಸಿಗೆಗಳ ಬಸವತಾರಕಂ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಹಿಂದೂಪುರ ಶಾಸಕ, ಚಿತ್ರನಟ ನಂದಮೂರಿ ಬಾಲಕೃಷ್ಣ ತಿಳಿಸಿದ್ದಾರೆ. ಶೀಘ್ರದಲ್ಲೇ ಅದಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು. ಆಂಧ್ರಪ್ರದೇಶದ ಜನರಿಗೆ ಹಿಂದೂಪುರ ಶಾಸಕ, ನಟ, ಬಸವತಾರಕಂ ಇಂಡೋ ಅಮೇರಿಕನ್ ಕ್ಯಾನ್ಸರ್ ಆಸ್ಪತ್ರೆಯ ಅಧ್ಯಕ್ಷ ನಂದಮೂರಿ ಬಾಲಕೃಷ್ಣ ಒಂದು ಒಳ್ಳೆಯ ಸುದ್ದಿ ನೀಡಿದ್ದಾರೆ. ಹೈದರಾಬಾದ್ನಲ್ಲಿ ಬಸವತಾರಕಂ ಆಸ್ಪತ್ರೆಯ ರಜತ ಮಹೋತ್ಸವದಲ್ಲಿ ಭಾಗವಹಿಸಿದ ಅವರು, ಆಸ್ಪತ್ರೆಯ ಅಭಿವೃದ್ಧಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಈಗ ಎಷ್ಟು…