ಶಿಸ್ತಿಲ್ಲದವರು, ಪಕ್ಷ ಹಿತಾಸಕ್ತಿಗಳಿಗೆ ಧಕ್ಕೆ ತರುವವರನ್ನು ವಾಪಸ್ಸು ಕರೆಯುವ ಪ್ರಶ್ನೆಯೇ ಇಲ್ಲ: ರಾಧಾ ಮೋಹನ್ ದಾಸ್
ಮಂಗಳೂರು, ಜೂನ್ 25: ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆಎಸ್ ಈಶ್ವರಪ್ಪ ಅವರನ್ನು ಪಕ್ಷಕ್ಕೆ ವಾಪಸ್ಸು ಕರೆಯಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ಬಿಜೆಪಿ ಮತ್ತು ಆ ನಾಯಕರ ನಡುವೆ ಸಂಬಂಧವೇ ಇಲ್ಲ ಎನ್ನುವಂತೆ ಮಾತಾಡಿದರು. ಅವರು ಯಾವ ಪಕ್ಷದಲ್ಲಿ ಇದ್ದಾರೋ ಗೊತ್ತಿಲ್ಲ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು, ಪಕ್ಷದ ಹಿತಾಸಕ್ತಿಗಳಿಗೆ ಧಕ್ಕೆ ತಂದವರನ್ನು ಪಕ್ಷಕ್ಕೆ ವಾಪಸ್ಸು ಕರೆಯುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ರಾಧಾ ಮೋಹನ್ ದಾಸ್ ಹೇಳಿದರು….