ಟಿಸಿಎಸ್, ವಿಪ್ರೋ ಇವರ್ಯಾರು ಅಲ್ಲ.. ಗರಿಷ್ಠ ವೇತನ ಪಡೆದ ಟೆಕ್ ಕಂಪನಿ ಸಿಇಒ ಸಾಲಿಗೆ ಸೇರಿದ ಮೋಹಿತ್ ಜೋಶಿ! | Mohit Joshi Becomes 3rd Highest Paid Tech Ceo Surpassing Tcs Wipro Leaders San
FY25 ರಲ್ಲಿ ಉದ್ಯೋಗಿಗಳ ಸರಾಸರಿ ಸಂಭಾವನೆಯಲ್ಲಿ ಶೇಕಡಾ 6.52 ರಷ್ಟು ಕಡಿತವಾಗಿದೆ. ಆದರೆ, ಮೋಹಿತ್ ಜೋಶಿಯವರ ಗಳಿಕೆಯು ಸರಾಸರಿ ಉದ್ಯೋಗಿ ವೇತನಕ್ಕಿಂತ 840.22 ಪಟ್ಟು ಹೆಚ್ಚಾಗಿದೆ. ಬೆಂಗಳೂರು (ಜೂ.25): ಟಿಸಿಎಸ್ ಭಾರತದ ಅತಿದೊಡ್ಡ ಐಟಿ ಸರ್ವೀಸ್ ಕಂಪನಿಗಳಲ್ಲಿ ಒಂದು. ಆದರೆ, ಟೆಕ್ ಕಂಪನಿಗಳಲ್ಲಿ ಗರಿಷ್ಠ ವೇತನ ಪಡೆಯುವ ಸಿಇಒ ವಿಚಾರಕ್ಕೆ ಬಂದರೆ, ಈ ಕಂಪನಿಗಳು ಲೆಕ್ಕಕ್ಕೇ ಇಲ್ಲ. ಕಳೆದ ಹಣಕಾಸು ವರ್ಷವೊಂದರಲ್ಲಿ ಗರಿಷ್ಠ ವೇತನ ಪಡೆದ ಟೆಕ್ ಕಂಪನಿ ಸಿಇಒ ಎನ್ನುವ ದಾಖಲೆಗೆ ಟೆಕ್ ಮಹೀಂದ್ರಾ ಕಂಪನಿಯ…