ಹಾರಲು ಯಾರ ಅನುಮತಿಯೂ ಕೇಳಬೇಡಿ, ರೆಕ್ಕೆ ನಿಮ್ಮದು; ಖರ್ಗೆ ಟೀಕೆ ಬೆನ್ನಲ್ಲೇ ಶಶಿ ತರೂರ್ ಮಾರ್ಮಿಕ ಪೋಸ್ಟ್
ನವದೆಹಲಿ, ಜೂನ್ 25: ಕಾಂಗ್ರೆಸ್ ಹೈಕಮಾಂಡ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದನ್ನು ಅವರೇ 2-3 ದಿನಗಳ ಹಿಂದೆ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆದರೆ, ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿರುವ ಶಶಿ ತರೂರ್ ಪ್ರಧಾನಿ ಮೋದಿಯವರನ್ನು (PM Narendra Modi) ಪದೇಪದೆ ಹೊಗಳುತ್ತಿರುವುದನ್ನು ಕಾಂಗ್ರೆಸ್ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಶಶಿ ತರೂರ್ “ಪ್ರಧಾನಿ ಮೋದಿ ಭಾರತದ ದೊಡ್ಡ ಆಸ್ತಿ. ಮೋದಿಯವರ ಶಕ್ತಿ,…