ಸಶಸ್ತ್ರ ಸಂಘರ್ಷ ಕೊನೆಗೊಳಿಸಿದ ಐತಿಹಾಸಿಕ ಸಾಧನೆಯ ಮಹತ್ವದ ಘಳಿಗೆ: ಈ ಶಾಂತಿ ಪ್ರಕ್ರಿಯೆಯಲ್ಲಿ ಗುರುದೇವರು
ಕೊಲಂಬಿಯಾದ ಬೊಗೋಟಾದ ಐಕಾನಿಕ್ ಪ್ಲಾಜಾ ಲಾ ಸಂತಾ ಮಾರಿಯಾದಲ್ಲಿ ಸಾವಿರಾರು ಜನರು ಜಮಾಯಿಸಿ, ಗುರುದೇವ ಶ್ರೀ ಶ್ರೀ ರವಿ ಶಂಕರ್ ರವರೊಂದಿಗೆ 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಆತ್ಮೀಯವಾಗಿ ಆಚರಿಸಿದರು. ಈ ವರ್ಷದ ಉತ್ಸವಕ್ಕೆ ವಿಶೇಷ ಮಹತ್ವವಿತ್ತು. ಇದು ಕೊಲಂಬಿಯಾ ದೇಶಕ್ಕೆ ಶಾಂತಿ ದೊರೆತು ನಿಖರವಾಗಿ ಹತ್ತನೇ ವರ್ಷ. ಹತ್ತು ವರ್ಷಗಳ ಹಿಂದೆ, ಕೊಲಂಬಿಯಾ ಸರ್ಕಾರ ಮತ್ತು ಫಾರ್ಕ್ (FARC) ಗೆರಿಲ್ಲಾ ಗುಂಪು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿ, ದಶಕಗಳ ಕಾಲದ ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸಿದ…