Love Doll Story: ಹುಡುಗಿಯರ ಸಹವಾಸ ಸಾಕೆಂದು ಗೊಂಬೆ ಜೊತೆ ಮದ್ವೆಯಾಗಿ 3 ಮಕ್ಕಳ ತಂದೆಯಾದ ಯುವಕ! | After A Bad Break Up Cristian Fell In Love With A Doll Named Natalia To Overcome His Loneliness Suc
ಯುವತಿಯೊಬ್ಬಳು ಕೈಕೊಟ್ಟ ಬಳಿಕ ಹೆಣ್ಣುಮಕ್ಕಳ ಮೇಲೆ ವಿಶ್ವಾಸವೇ ಕಳೆದುಕೊಂಡ ಯುವಕನೊಬ್ಬ ಗೊಂಬೆಯ ಜೊತೆ ಮದುವೆಯಾಗಿ ಮೂವರು ಮಕ್ಕಳ ಅಪ್ಪ ಆಗಿದ್ದಾನೆ. ಏನಿದು ಸುದ್ದಿ ನೋಡಿ! ಗಂಡು-ಗಂಡು, ಹೆಣ್ಣು-ಹೆಣ್ಣು ಮದ್ವೆಯಾಗಿರೋದು ಕೇಳಿಯಾಯ್ತು, ಅಪ್ಪ-ಮಗಳ ಪ್ರೇಮ ಕಥೆನೂ ಆಗೋಯ್ತು, ಗಂಡಸರ ಸಹವಾಸವೇ ಬೇಡ ಎಂದು ಹೆಣ್ಣು ಮಕ್ಕಳು ತಮ್ಮನ್ನು ತಾವೇ ಮದುವೆಯಾಗಿ ಹನಿಮೂನ್ ಹೋಗಾಯ್ತು… ಇದೀಗ ವಿಚಿತ್ರ ಎನ್ನುವ ಘಟನೆ ನಡೆದಿದೆ. ಇಲ್ಲಿ ಯುವಕನೊಬ್ಬ ಹೆಣ್ಣುಮಕ್ಕಳ ಸಹವಾಸವೇ ಬೇಡ ಎಂದು ಗೊಂಬೆಯನ್ನು ಮದುವೆಯಾಗಿದ್ದು, ಈಕೆ ಮೂರು ಮಕ್ಕಳ ಅಪ್ಪ ಆಗಿದ್ದಾನೆ….