ಕಾರ್ಬೋಹೈಡ್ರೇಟ್ ಸೇವನೆ ಬಿಟ್ರೆ ತೂಕ ಇಳಿಯುತ್ತಾ? ಸಂಪೂರ್ಣ ಬಿಟ್ರೆ ದೇಹ ಏನಾಗುತ್ತೆ? | What Happens To Your Body When You Avoid Carbs
ನಮ್ಮ ದೇಹಕ್ಕೆ ಎಲ್ಲ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಬೇಕು. ಯಾವ್ದೆ ಹೆಚ್ಚಾದ್ರೂ ಯಾವ್ದು ಕಡಿಮೆ ಆದ್ರೂ ಅದು ಸಹಿಸೋದಿಲ್ಲ. ನೀವು ಕಾರ್ಬೋಹೈಡ್ರೇಟ್ ಸೇವನೆಯನ್ನೇ ಬಿಟ್ರೆ ದೇಹಕ್ಕೆ ಏನಾದ್ರೂ ನಷ್ಟವಾಗುತ್ತಾ? ಕಾರ್ಬೋಹೈಡ್ರೇಟ್ (Carbohydrate) ಮತ್ತೆ ಕ್ಯಾಲೋರಿಯನ್ನು ಹೆಚ್ಚಾಗಿ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುತ್ತೆ ಎನ್ನುವ ನಂಬಿಕೆ ಇದೆ. ಇದೇ ಕಾರಣಕ್ಕೆ ಅನೇಕರು ಕಾರ್ಬೋಹೈಡ್ರೇಟ್ ಇಲ್ಲದ ಡಯಟ್ (diet) ಶುರು ಮಾಡ್ತಿದ್ದಾರೆ. ಕಾರ್ಬೋಹೈಡ್ರೇಟ್ ಇಲ್ಲದ ಡಯಟ್ ನಿಜವಾಗ್ಲೂ ಪ್ರಯೋಜನಕಾರಿಯೇ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳೋದು ಸಹಜ. ಕಾರ್ಬೋಹೈಡ್ರೇಟ್ ನಮ್ಮ ದೇಹಕ್ಕೆ ಪ್ರಾಥಮಿಕ…