Today is Monday, good luck for this zodiac sign 23ನೇ ಜೂನ್ 2025 ಸೋಮವಾರ | Today Horoscope Prediction For June 23rd 2025 All Zodiac Signs Suh
23ನೇ ಜೂನ್ 2025 ಸೋಮವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ ಮೇಷ(Aries): ಆಗಬೇಕಾದ ಕೆಲಸಗಳನ್ನು ಮುಂದು ಹಾಕುತ್ತೀರಿ. ಇದರಿಂದ ಬಾಕಿ ಕೆಲಸಗಳ ಗುಡ್ಡ ಬೆಳೆಯುತ್ತಾ ಹೋಗುವುದು. ಮಾತುಗಾರಿಕೆ ಚೆನ್ನಾಗಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ಸಂಬಂಧಗಳು ಗಟ್ಟಿಯಾಗುತ್ತವೆ. ವಿಷ್ಣು ಸಹಸ್ರನಾಮ ಪಠಿಸಿ. ವೃಷಭ(Taurus): ಸ್ಪರ್ಧೆಯಲ್ಲಿ ನೀವು ಉತ್ತಮವಾಗಿ ಕಾರ್ಯ ನಿರ್ವಹಿಸುವಿರಿ. ಗುರಿಯತ್ತ ಗಮನವನ್ನು ಇರಿಸಿ. ಬೆಳವಣಿಗೆಯಲ್ಲಿ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವ…