10 ವರ್ಷದಿಂದ ಅಂಗಲಾಚಿದ್ರೂ ಪೊಲೀಸರ ಗೋಳು ಕೇಳ್ತಿಲ್ಲ ಸರ್ಕಾರ! ಖಾಕಿಗೆ ಬೇಡಿ ಹಾಕಿತಾ ಸರ್ಕಾರ? ಇವರ ಹಿತ ಕಾಯೋರ್ಯಾರು? | Karnataka Police Transfer Issue Cops Await Transfers For 10 Years Constables Raise Concerns Over Delays Gdp
ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ಪೊಲೀಸ್ ಕಾನ್‌ಸ್ಟೆಬಲ್‌ಗಳು, ವಿಶೇಷವಾಗಿ 2016ರ ಬ್ಯಾಚ್‌ನವರು, ಕಳೆದ 10 ವರ್ಷಗಳಿಂದ ಅಂತರ ಜಿಲ್ಲಾ ವರ್ಗಾವಣೆಗಾಗಿ ಕಾಯುತ್ತಿದ್ದಾರೆ. ಸರ್ಕಾರದ ವಿಳಂಬ ನೀತಿ, ಕುಟುಂಬದ ಒತ್ತಡ ಮತ್ತು ಮಾನಸಿಕ ಸಂಕಷ್ಟದಿಂದಾಗಿ ಅವರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೆಲವರು ದಯಾಮರಣಕ್ಕೂ ಮನವಿ ಸಲ್ಲಿಸಿದ್ದಾರೆ. ಬೆಂಗಳೂರು ನಗರಕ್ಕೆ ಭದ್ರತೆ ಒದಗಿಸುವ ಪೊಲೀಸರೇ ಇಂದು ನೆಮ್ಮದಿ ಕಳೆದುಕೊಂಡಿರುವ ಸ್ಥಿತಿ ಎದುರಾಗಿದೆ. ನಗರವನ್ನು ಕಾಪಾಡುವ ಖಾಕಿ ಪಡೆ ಕಳೆದ 10ವರ್ಷಗಳಿಂದ ತಮ್ಮದೇ ಸಮಸ್ಯೆಗಳ ನಡುವೆ ಸಂಕಷ್ಟದ ಜೀವನ ನಡೆಸುತ್ತಿರುವುದು ಆತಂಕಕಾರಿ…