ಓ ಮೈ ಗಾಡ್! ಭಾರತದ ಈ ಪ್ರದೇಶಗಳನ್ನು ಛಿದ್ರ ಛಿದ್ರ ಮಾಡಲು ನಡೆದಿತ್ತು ದೊಡ್ಡ ಪ್ಲಾನ್: ಪಾಕ್ ಹ್ಯಾಂಡ್ಲರ್ ಸಂಚು ಹೇಗಿತ್ತು?
ಲಖನೌ, ಏ.4: ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಮತ್ತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಲು ಹೊಂಚು ಹಾಕಿದ್ದ ಭಯೋತ್ಪಾದನಾ ಜಾಲದ ಉತ್ತರ ಪ್ರದೇಶದ ETIS (ATS) ಯಶಸ್ವಿಯಾಗಿ ಭೇದಿಸಿದೆ. ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳ ನಿರ್ದೇಶನದಂತೆ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಗ್ಯಾಂಗ್‌ನ ಮುಖ್ಯಸ್ಥ ಮೀರತ್ ನಿವಾಸಿ ಸಾಕಿಬ್ ಅಲಿಯಾಸ್ ಡೆವಿಲ್ ಸೇರಿದಂತೆ ಗೌತಮ್ ಬುದ್ಧ ನಗರದ ವಿಕಾಸ್ ಗಹ್ಲಾವತ್ ಅಲಿಯಾಸ್ ರೌನಕ್, ಲೋಕೇಶ್ ಅಲಿಯಾಸ್ ಪಪ್ಲಾ ಮತ್ತು ಮೀರತ್ನ ಅರ್ಬಾಬ್ ಎಂಬುವವರನ್ನು…