ಲಖನೌ, ಜೂನ್ 26: ಆ್ಯಕ್ಸಿಯಮ್-4 ಮಿಶನ್ ಭಾಗವಾಗಿ ಭಾರತದ ಶುಭಾಂಶು ಶುಕ್ಲಾ ಮತ್ತು ಅವರೊಂದಿಗೆ ಇತರ ಮೂವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ ಎಕ್ಸ್ ಕ್ರ್ಯೂ ಡ್ರಾಗನ್ ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಶನ್ (ಐಎಸ್ಎಸ್) (International Space Station ) ತಲುಪಿದ್ದು, ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಹಾರಿದ ಎರಡನೇ ಭಾರತೀಯ ಮತ್ತು ಐಎಸ್ಎಸ್ ತಲುಪಿದ ಮೊಟ್ಟ ಮೊದಲ ಭಾರತೀಯನೆಂಬ ಹಿರಿಮೆಗೆ ಪಾತ್ರರಾದರು. ಭಾರತೀಯ ಕಾಲಮಾನದ ಪ್ರಕಾರ ಸಾಯಂಕಾಲ 4:03 ಗಂಟೆಗೆ ಸ್ಪೇಸ್ ಎಕ್ಸ್ ಡ್ರಾಗನ್ ಐಎಸ್ಎಸ್ ನಲ್ಲಿ ಡಾಕ್ ಆಗಿದೆ. ನೌಕೆ ಡಾಕ್ ಆದ ಕೂಡಲೇ ಗಗನಯಾತ್ರಿಗಳು ಸ್ಪೇಸ್ ಸ್ಟೇಶನ್ ಒಳಗಡೆ ಪ್ರವೇಶಿಸುವುದಿಲ್ಲ ಎಂದು ಮಾಹಿತಿಯೊಂದು ಹೇಳುತ್ತದೆ. ಶುಕ್ಲಾ ಅವರೊಂದಿಗೆ ಅಮೆರಿಕದ ಪೆಗ್ಗಿ ವ್ಹಿಟ್ಸನ್, ಪೊಲೆಂಡ್ನ ಸ್ಲೋವಾಜ್ ಉಜಾನ್ಸ್ಕಿ ಮತ್ತು ಹಂಗರಿಯ ಟೈಬರ್ ಕಾಪು ಗಗನಯಾತ್ರಿಗಳಾಗಿದ್ದಾರೆ.
ಇದನ್ನೂ ಓದಿ: ಶುಭಾಂಶು ಶುಕ್ಲಾ 1.4 ಶತಕೋಟಿ ಭಾರತೀಯರ ಭರವಸೆ ಹೊತ್ತು ಬಾಹ್ಯಾಕಾಶಕ್ಕೆ ಹಾರಿದ್ದಾರೆ; ಆಕ್ಸಿಯಮ್ -4 ಉಡಾವಣೆಗೆ ಮೋದಿ ಶ್ಲಾಘನೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ