ಕೊಪ್ಪಳ, (ಜೂನ್ 29): ಬುರ್ಖಾ (Burqa) ಹಾಕಿಕೊಂಡು ಬಂದ ಮಹಿಳೆಯರು ಗೃಹಬಳಕೆಯ ಸಾಮಾಗ್ರಿಗಳನ್ನು ಕ್ಷಣಮಾತ್ರದಲ್ಲಿ ಕಳ್ಳತನ (Theft) ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಈ ಘಟನೆ ಕೊಪ್ಪಳ (Koppal) ಜಿಲ್ಲೆಯ ಕಾರಟಗಿ (Karatagi) ಪಟ್ಟಣದಲ್ಲಿ ನಡೆದಿದೆ. ವಿಎ ಬಜಾರ್‌ನಲ್ಲಿ ಜೂನ್ 18ರಂದು ಘಟನೆ ನಡೆದಿದ್ದು, ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬುರ್ಖಾ ಧರಿಸಿಕೊಂಡು ಬಂದ ಇಬ್ಬರು ಮಹಿಳೆಯರು ಆಹಾರ ಸಾಮಾಗ್ರಿಗಳನ್ನು ಬುರ್ಖಾದೊಳಗೆ ಹಾಕಿಕೊಂಡು ಎಸ್ಕೇಪ್ ಆಗಿದ್ದಾರೆ.
Published On – 1:54 pm, Sun, 29 June 25