ಬೆಂಗಳೂರು, ಜೂನ್ 22: ರಾಜ್ಯ ಕಾಂಗ್ರೆಸ್ ಸರ್ಕಾರವು (Congress Government) ಅಲ್ಪಸಂಖ್ಯಾತರಿಗರೆ (Minority) ಸರ್ಕಾರಿ ಗುತ್ತಿಗಳಲ್ಲಿ ಶೇ5 ರಷ್ಟು ಮೀಸಲಾತಿ ಮತ್ತು ರಾಜ್ಯ ಸರ್ಕಾರದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 15 ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಜೊತೆಗೆ ಸರ್ಕಾರ ಮತ್ತೆ ಜಾತಿ ಗಣತಿ ಸಮೀಕ್ಷೆ ನಡೆಸಲು ತೀರ್ಮಾನಿಸಿದ ವಿಚಾರವಾಗಿ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಕೆ ಮುಕಡಪ್ಪ ಮಾತನಾಡಿ, ಎಲ್ಲ ಹಿಂದುಳಿದವರನ್ನು ಒಂದು ಮಾಡಬೇಕು. ಈಗ ಜಾತಿ ಮೇಲೆ ಗುರುತಿಸುತ್ತಾರೆ. ಸರ್ಕಾರ ಒಂದೇ ಜಾತಿಗೆ ಸೀಮಿತ ಆಗಬಾರದು. ತಾಲೂಕಿಗೊಂದು ಸಭೆ ಮಾಡುತ್ತೇವೆ. ನಾವು ಸುಮ್ಮನೆ ಬಿಡಲ್ಲ, ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ಬೆಂಗಳೂರಿಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂತರಾಜು ವರದಿಯಲ್ಲಿ ಬಹಳ ತಪ್ಪಿದೆ, ಮನೆ ಮನೆಗೆ ಹೋಗಿ ಸರ್ವೆ ಮಾಡಿಲ್ಲ. 1952ರ ಕಾಕಾ ಕಾಲೇಕರ್ ರಿಪೋರ್ಟ್ ಮಾಡಲು ಬಿಡಲಿಲ್ಲ. ಡಾ. ಬಿ. ಆರ್ ಅಂಬೇಡ್ಕರ್ ಅವರು ಎಲ್ಲ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದಾರೆ. ಹಿಂದೂ ಬಿಲ್ ಕೋಡ್, ಪರ್ಮನೆಂಟ್ ಬ್ಲಾಕ್ ವರ್ಡ್ ಕಮಿಷನ್ ಆಗಿಲ್ಲ ಎಂದು ಡಾ. ಬಿ.ಆರ್ ಅಂಬೇಡ್ಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಈ ವರದಿಯನ್ನು ನೋಡಲಿಲ್ಲ. ಕಾಂಗ್ರೆಸ್ನವರು ಹಿಂದುಳಿದ ವರ್ಗದವರನ್ನು ಯಾಕೆ ಪ್ರಧಾನಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಒಕ್ಕಲಿಗ, ಲಿಂಗಾಯತ ಸಮುದಾಯಲ್ಲೂ ಬಡವರಿದ್ದಾರೆ ಅದರ ಜಾತಿ ಜನಗಣತಿ ಆಗಬೇಕು. ಮಹಾತ್ಮಾ ಗಾಂಧಿಯವರನ್ನು ಬಿ.ಆರ್ ಅಂಬೇಡ್ಕರ್ ಅವರು ಒಪ್ಪಿರಲಿಲ್ಲ. ಕಾಂಗ್ರೆಸ್ಗೆ ಓಟು ಹಾಕಬೇಡಿ ಎಂದು ಬಿ.ಆರ್ ಅಂಬೇಡ್ಕರ್ ಅವರು ಹೇಳಿದ್ದರು. ದಲಿತ ಸಮುದಾಯರವನ್ನು ಸಿಎಂ ಆಗಿ ರಾಹುಲ್ ಗಾಂಧಿ ಘೋಷಣೆ ಮಾಡಲಿ. ಅವರು ಮೊದಲಿನಿಂದಲೂ ಹಿಂದುಳಿದ ವರ್ಗದ ಪರ ಇಲ್ಲ. 36 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಏಕೆ ಜಾತಿ ಜನಗಣತಿ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ
ಇದನ್ನೂ ಓದಿ: ಮೀಸಲಾತಿ ಬಗ್ಗೆ ಕೇಂದ್ರ ಯಾವುದೇ ಸುತ್ತೋಲೆ ಹೊರಡಿಸಿಲ್ಲ: ಜಮೀರ್ ಹೇಳಿಕೆಗೆ ಜೋಶಿ ತಿರುಗೇಟು
ದಲಿತರಿಗಿಂತ, ಹಿಂದುಳಿದ ವರ್ಗದವರ ಮನೆಯಲ್ಲೇ ಡಾ. ಬಿಆರ್ ಅಂಬೇಡ್ಕರ್ ಅವರ ಫೋಟೊ ಇರಬೇಕು. ಬಿ. ಆರ್ ಅಂಬೇಡ್ಕರ್ ಅವರ ಸಂವಿಧಾನದ ಪ್ರಕಾರ ಪ್ರಧಾನಿ ಮೋದಿ, ಬಿಜೆಪಿ ನಡೆಯುತ್ತಿದೆ. ಜಾತಿ ಜನಗಣತಿ ಆಗಲೇಬೇಕು. ಬೆಂಗಳೂರಿನಲ್ಲಿ ಎಲ್ಲ ಸಮುದಾಯದವರು ಮೇಯರ್ ಆಗುತ್ತಿದ್ದಾರೆ. ಇದಕ್ಕೆಲ್ಲ ಮೀಸಲಾತಿ ಕಾರಣ. ಹಿಂದೂಗಳೆಲ್ಲ ಒಂದಾಗಬೇಕು. ಅಲ್ಪಸಂಖ್ಯಾತ ಅಂತ ಮುಸಲ್ಮಾನರಿಗೆ ಎಲ್ಲ ಕೊಡುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 3:41 pm, Sun, 22 June 25