Headlines

ಆರ್‌.ಅಶೋಕ ಮೊದಲು ತಮ್ಮ ಖುರ್ಚಿ ಉಸಿಕೊಳ್ಳಲಿ: ಸಚಿವ ಎಂ.ಬಿ.ಪಾಟೀಲ ಟಾಂಗ್ | Let R Ashok Take His Seat First Says Minister Mb Patil Gvd

ಆರ್‌.ಅಶೋಕ ಮೊದಲು ತಮ್ಮ ಖುರ್ಚಿ ಉಸಿಕೊಳ್ಳಲಿ: ಸಚಿವ ಎಂ.ಬಿ.ಪಾಟೀಲ ಟಾಂಗ್ | Let R Ashok Take His Seat First Says Minister Mb Patil Gvd



ವಿಪಕ್ಷ ನಾಯಕ ಆರ್‌.ಅಶೋಕ ದೆಹಲಿಗೆ ಹೋಗಿ ಕುಳಿತುಕೊಂಡಿದ್ದರು. ದಸರಾ ಒಳಗೆ ತಮ್ಮ ಕುರ್ಚಿ ಬದಲಾಗುತ್ತದೆ ಎಂದು ತಮ್ಮ ಬಗ್ಗೆ ಹೇಳಿರಬೇಕು. ತಮ್ಮ‌ ಕುರ್ಚಿ ಬಿಟ್ಟಿದ್ದಾರೆ, ಅವರದ್ದೇ ನೆಲೆ ಇಲ್ಲ. ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಟಾಂಗ್ ಕೊಟ್ಟರು.

ವಿಜಯಪುರ (ಜೂ.30): ವಿಪಕ್ಷ ನಾಯಕ ಆರ್‌.ಅಶೋಕ ದೆಹಲಿಗೆ ಹೋಗಿ ಕುಳಿತುಕೊಂಡಿದ್ದರು. ದಸರಾ ಒಳಗೆ ತಮ್ಮ ಕುರ್ಚಿ ಬದಲಾಗುತ್ತದೆ ಎಂದು ತಮ್ಮ ಬಗ್ಗೆ ಹೇಳಿರಬೇಕು. ತಮ್ಮ‌ ಕುರ್ಚಿ ಬಿಟ್ಟಿದ್ದಾರೆ, ಅವರದ್ದೇ ನೆಲೆ ಇಲ್ಲ. ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಟಾಂಗ್ ಕೊಟ್ಟರು. ದಸರಾ ವೇಳೆಗೆ ಸಿಎಂ ಬದಲಾಗುತ್ತಾರೆ, ನೂತನ ಸಿಎಂ ದಸರಾ ಉದ್ಘಾಟನೆ ಮಾಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌.ಅಶೋಕಗೆ ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲು ಹೇಳಿ.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಉಹಾಪೋಹಗಳಿಗೆ, ಯಾರದ್ದೇ ಹೇಳಿಕೆಗೆ ಬೆಲೆ ಇಲ್ಲ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಅಂತಿಮ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿಡ್ಲ್ಯೂಸಿ ಕಾಲಕಾಲಕ್ಕೆ ನಿರ್ಧಾರ ಮಾಡುತ್ತಾರೆ. ಯಾರದ್ದೇ ಹೇಳಿಕೆ, ಮಾಧ್ಯಮ ಹೇಳಿಕೆ, ಎಂ.ಬಿ.ಪಾಟೀಲ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಸಿಎಂ ಅಧಿಕಾರ‌ ಎರಡೂವರೆ ವರ್ಷ ಹಂಚಿಕೆ ಆಗಿದೆ ಎಂಬ ವಿಚಾರದ ಕುರಿತು ಪ್ರಶ್ನೆಗೆ ಮರು ಪ್ರಶ್ನಿಸಿದ ಅವರು, ನಿಮ್ಮ ಮುಂದೆ ಮಾತುಕತೆ ಆಗಿದೀಯಾ?. ನಿಮಗೆ ಗೊತ್ತಾ? ಅಗ್ರಿಮೆಂಟ್ ಆಗಿದೆಯಾ ಎಂದು ಕೇಳಿದರು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪಸಿಂಗ್ ಸುರ್ಜೆವಾಲಾ ರಾಜ್ಯ ಪ್ರವಾಸ ವಿಚಾರವಾಗಿ ಮಾತನಾಡಿದ ಅವರು, ಅವರು ರಾಜ್ಯ ಉಸ್ತುವಾರಿಯಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ, ಅದು ಅವರ ಕರ್ತವ್ಯವಾಗಿದೆ. ರಾಜ್ಯ ಉಸ್ತುವಾರಿಗಳು ಅವಾಗವಾಗ ಆಗಮಿಸಿ ಸಭೆಗಳನ್ನು ಮಾಡುತ್ತಾರೆ. ಸರ್ಕಾರದಲ್ಲಿ ಹಾಗೂ ಪಕ್ಷದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ವೀಕ್ಷಣೆ ಮಾಡುವುದು ಸಾಮಾನ್ಯ. ಶಾಸಕರು ಅಸಮಾಧಾನ ಹೊರ ಹಾಕಿರುವ ನಿಟ್ಟಿನಲ್ಲಿ ಆಗಮಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಾಗೇನಿಲ್ಲ ಯಾವಾಗಲೂ ಬರ್ತಾ ಇರ್ತಾರೆ. ಎಲ್ಲರ ಅಭಿಪ್ರಾಯ ಕೇಳುತ್ತಾರೆ, ಸರ್ಕಾರ ಹೇಗೆ‌ ನಡೆಯುತ್ತಿದೆ. ಪಕ್ಷ ಸಂಘಟನೆ ಹೇಗೆ ಆಗುತ್ತಿದೆ?, ಪಕ್ಷದ ಕಾರ್ಯಕ್ರಮಗಳ ಕುರಿತು ರಿವಿಲ್ ಮಾಡುತ್ತಾರೆ ಎಂದರು.

ಸಂವಿಧಾನದಲ್ಲಿ ಜ್ಯಾತ್ಯಾತೀತ ಹಾಗೂ ಸಮಾಜವಾದ ಶಬ್ದಗಳು ಇರಬಾರದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸಮಾಜವಾದ, ಜ್ಯಾತ್ಯಾತೀತ ಇದ್ದರೆ ತಪ್ಪೇನು?. ಬಸವಣ್ಣ, ಬಸವಾದಿ ಶರಣರು, ಬುದ್ದ, ನಾರಾಯಣಗುರು, ಸ್ವಾಮಿ ವಿವೇಕಾನಂದರು‌ ಜ್ಯಾತ್ಯಾತೀತತೆ ಬಗ್ಗೆ ಹೇಳಿದ್ದಾರೆ. ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟವೆಂದು ಬಣ್ಣಿಸಿದ್ದಾರೆ. ಸೆಕ್ಯೂಲರ್ ಪದದಲ್ಲಿ ತಪ್ಪೆನಿದೆ?, ಹಾಗಾದರೆ ಕಮ್ಯೂನಲ್ ಪದ ಸೇರಿಸಬೇಕಾ?, ನಾವು ಕೋಮುವಾದಿಗಳು ಎಂದು ಜೋರಾಗಿ ಹೇಳಬೇಕಾ?.

ಸಮಾಜವಾದ ಹಾಗೂ ಜ್ಯಾತ್ಯಾತೀತ ಪದಗಳಿಂದ ಸಂವಿಧಾನ ಮತ್ತಷ್ಟು ಬಲವಾಗುತ್ತದೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವುದು ಬೇರೆ ಕಾರಣಕ್ಕಾಗಿ. ಮನುವಾದ, ಮನುಸೃತಿಗಾಗಿ. ನಾವು ಭಾರತ ರಾಷ್ಟ್ರವನ್ನು ಸರ್ವ ಜನಾಂಗದ ಶಾಂತಿಯ ತೋಟ ಎನ್ನಲು, ಜ್ಯಾತ್ಯಾತೀತ ಹಾಗೂ ಸಮಾನವಾದ ಪದ ಸೇರಿಸಿರಬಹುದು. ತಪ್ಪೇನು ಮಾಡಿಲ್ಲ, ದೇಶಕ್ಕೆ ಹಾನಿಯಾಗುವಂತದ್ದು ಮಾಡಿಲ್ಲ. ಎಲ್ಲ ಜಾತಿ ವರ್ಗ ಸರಿಸಮನಾಗಿ ಕಾಣುವಂಥದ್ದು. ಬಾಬಾಸಾಹೇಬ ಅಂಬೇಡ್ಕರ ಅವರ ಅರ್ಥವೂ ಅದೇ ಆಗಿತ್ತು. ಹೊಸಬಾಳೆಯವರು ಟೆಕ್ನಿಕಲ್ ಆಗಿ ಮಾತನಾಡುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ ಹೇಳಿದರು.

ಸೆಕ್ಯೂಲರ್ ಪದದಲ್ಲಿ ತಪ್ಪೆನಿದೆ?, ಹಾಗಾದರೆ ಕಮ್ಯೂನಲ್ ಪದ ಸೇರಿಸಬೇಕಾ?, ನಾವು ಕೋಮುವಾದಿಗಳು ಎಂದು ಜೋರಾಗಿ ಹೇಳಬೇಕಾ?. ಸಮಾಜವಾದ ಹಾಗೂ ಜ್ಯಾತ್ಯಾತೀತ ಪದಗಳಿಂದ ಸಂವಿಧಾನ ಮತ್ತಷ್ಟು ಬಲವಾಗುತ್ತದೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವುದು ಬೇರೆ ಕಾರಣಕ್ಕಾಗಿ. ಮನುವಾದ, ಮನುಸೃತಿಗಾಗಿ. ನಾವು ಭಾರತ ರಾಷ್ಟ್ರವನ್ನು ಸರ್ವ ಜನಾಂಗದ ಶಾಂತಿಯ ತೋಟ ಎನ್ನಲು, ಜ್ಯಾತ್ಯಾತೀತ ಹಾಗೂ ಸಮಾನವಾದ ಪದ ಸೇರಿಸಿರಬಹುದು. ತಪ್ಪೇನು ಮಾಡಿಲ್ಲ, ದೇಶಕ್ಕೆ ಹಾನಿಯಾಗುವಂತದ್ದು ಮಾಡಿಲ್ಲ. ಎಲ್ಲ ಜಾತಿ ವರ್ಗ ಸರಿಸಮನಾಗಿ ಕಾಣುವಂಥದ್ದು.
-ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ



Source link

Leave a Reply

Your email address will not be published. Required fields are marked *