ಬೆಂಗಳೂರು, (ಜೂನ್ 29): ಆಸ್ತಿ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರವು ಇ-ಖಾತಾ (E-Khata) ಅಭಿಯಾನ ಹಮ್ಮಿಕೊಂಡಿದೆ. ಕರ್ನಾಟಕ ಗ್ರಾಮ ಸ್ವರಾಜ್-ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2025 ಮಂಡಿಸಿದ್ದು, ಈ ಮೂಲಕ ಗ್ರಾಮೀಣ ಭಾಗದ ಅನಧಿಕೃತ ಆಸ್ತಿಗಳಿಂದ ತೆರಿಗೆ ಅಥವಾ ದಂಡ ವಸೂಲಿ ಹಾಗೂ ಆ ಸ್ವತ್ತುಗಳನ್ನು ಇ-ಖಾತಾ ವ್ಯವಸ್ಥೆಯಡಿ ತರಲಿದೆ. ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಇದ್ದ ಇ-ಖಾತಾ ವಿತರಣೆ ಇನ್ಮುಂದೆ ಪಂಚಾಯಿತಿ (Grama Panchayat) ವ್ಯಾಪ್ತಿಯಲ್ಲೂ ಇ-ಖಾತಾ ವಿತರಣೆಗೆ ಪ್ಲ್ಯಾನ್ ಮಾಡಿದ್ದು, ಇದೇ ಜುಲೈ 15ರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಇ-ಖಾತಾ ಸಿಗುವ ಸಾಧ್ಯತೆಗಳಿವೆ.
ಈ ಬಗ್ಗೆ ಟಿವಿ9ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿದ್ದು, ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಇ-ಖಾತಾ ವಿತರಣೆ ಮಾಡಲಾಗುತ್ತಿದೆ. ಆದ್ರೆ, ಇದೀಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ ವಿತರಣೆಗೆ ಪ್ಲ್ಯಾನ್ ಮಾಡಲಾಗಿದ್ದು, ಜುಲ್ 15ರಿಂದ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ ನೋಂದಣಿಗೆ ಪ್ಲ್ಯಾನ್ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಜುಲೈ 1 ರಿಂದ ಮನೆ ಬಾಗಿಲಿಗೆ ಬರಲಿದೆ ಕರಡು ಇ ಖಾತಾ: ಬಿಬಿಎಂಪಿ ಮಹತ್ವದ ಕ್ರಮ
ಸದ್ಯ ಬೆಂಗಳೂರಲ್ಲಿ 50 ಲಕ್ಷ ಇ-ಖಾತಾ ನೋಂದಣಿಯಾಗಿದೆ . ಬ್ಯಾಟರಾಯನಪುರ ವ್ಯಾಪ್ತಿಯಲ್ಲೇ 50 ಸಾವಿರ ನೋಂದಣಿಯಾಗಿದೆ . ಇವತ್ತು ಜನರಿಗೆ ಮೇಳದ ಮೂಲಕ ಖಾತಾ ವಿತರಿಸ್ತಿದ್ದೇವೆ .ಮನೆ ಮನೆಗೆ ಇ-ಖಾತಾ ಕಾರ್ಯಕ್ರಮಕ್ಕೆ ಡಿಸಿಎಂ ಚಾಲನೆ ನೀಡುತ್ತಾರೆ. ಸದ್ಯ ಈಗಾಗಲೇ ಬೆಳಗ್ಗೆಯಿಂದ 2 ಸಾವಿರ ಜನರು ನೋಂದಣಿಗೆ ಬಂದಿದ್ದಾರೆ. ಇದೇ ರೀತಿ ಬೇರೆ ಬೇರೆ ಕ್ಷೇತ್ರಗಳಲ್ಲೂ ಮೇಳ ನಡೆಸಲು ಸರ್ಕಾರ ಚಿಂತಿಸಲಿದೆ . ಸದ್ಯ ಇದರಿಂದ ಜನರಿಗೆ ಸುಲಭವಾಗಿ ಇ-ಖಾತಾ ಪಡೆಯಲು ಸಹಾಯವಾಗುತ್ತೆ . ಇ-ಖಾತಾ ಇದ್ರೆ ನಿಮ್ಮ ಆಸ್ತಿಗೆ ಸುರಕ್ಷತೆ ಇರುತ್ತೆ ಎಂದರು.
ಇ-ಖಾತಾ ಎಂದರೆ ಏನು?
ರಾಜ್ಯದಲ್ಲಿ A ಖಾತಾ E ಮತ್ತು B ಆಸ್ತಿ ದಾಖಲೆ ಎಂದು ವಿಭಜಿಸಲಾಗಿದೆ. ಹೀಗಾಗಿ ಖಾತೆಗಳ ವಿಚಾರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಖಾತಾಗಳ ಬಗ್ಗೆ ಜನರಲ್ಲಿ ಗೊಂದಲ ಇದೆ. ಆ ಎಲ್ಲಾ ಗೊಂದಲಗಳಿಗೆ ಇಲ್ಲಿ ಉತ್ತರ ಇದೆ. ಖಾತಾ ಪ್ರಮಾಣ ಪತ್ರ ಎನ್ನುವುದು ಆಸ್ತಿ ಮಾಲೀಕತ್ವ ಹಾಗೂ ಆ ಆಸ್ತಿಯ ನಿಖರ ಮಾಹಿತಿಯಾಗಿದೆ. ಬಿಬಿಎಂಪಿ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳು ನೀಡುವ ಈ ಪ್ರಮಾಣಪತ್ರದಲ್ಲಿ ಆಸ್ತಿಯ ಗಾತ್ರ, ಯಾವ ಪ್ರದೇಶ, ಸ್ಥಳ ಹಾಗೂ ಆ ಆಸ್ತಿ ವಸತಿ ಅಥವಾ ವಾಣಿಜ್ಯ ಯಾವ ವ್ಯಾಪ್ತಿಗೆ ಸೇರಿದೆ ಎನ್ನುವುದು ಸೇರಿದಂತೆ ಎಲ್ಲಾ ಸಂಪೂರ್ಣ ಮಾಹಿತಿಯೂ ಅದರಲ್ಲಿ ಇರುತ್ತದೆ. E-ಖಾತಾ ಎನ್ನುವುದು A ಖಾತಾದ ಡಿಜಿಟಲ್ ಆವೃತ್ತಿಯಾಗಿದೆ. ರಾಜ್ಯದಲ್ಲಿ ಇದೀಗ ಆಸ್ತಿ ನೋಂದಣಿಗೆ E-ಖಾತಾ ಕಡ್ಡಾಯವಾಗಿದೆ.
- ಇ-ಖಾತಾ ಎನ್ನುವುದು ಆಸ್ತಿ ವಿವರಗಳನ್ನು ಡಿಜಿಟಲೀಕರಣಗೊಳಿಸುವ ಆನ್‌ಲೈನ್ ವ್ಯವಸ್ಥೆಯಾಗಿದೆ.
- ಇ-ಖಾತಾ ಆಸ್ತಿ ನೋಂದಣಿ, ತೆರಿಗೆ ಪಾವತಿ ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಣ ಮಾಡುತ್ತದೆ. ಇದರಿಂದ ಆಸ್ತಿ ಮಾರಾಟ ಹಾಗೂ ಖರೀದಿ ಮಾಡುವುದಕ್ಕೆ ಸಹಾಯ ಆಗುತ್ತದೆ.
- ಇ-ಖಾತಾ ಆಸ್ತಿ ಪಾರದರ್ಶಕತೆಯನ್ನು ಸೂಚಿಸುತ್ತದೆ. ಅಲ್ಲದೆ ಆಸ್ತಿ ಲೋಪಗಳನ್ನು ಕಡಿಮೆ ಮಾಡುತ್ತದೆ.
- ಇ-ಖಾತಾ ಆಸ್ತಿಯನ್ನು ಖರೀದಿಸುವ ಅಥವಾ ಮಾರಾಟ ಮಾಡುವಾಗ ಮೋಸ ಹೋಗದಂತೆ ತಡೆಯುತ್ತದೆ
ಇನ್ನು ನೀವು ಇ -ಖಾತಾ ಮಾಡಿಸಿಕೊಳ್ಳುವುದರಿಂದ ಹಲವು ಲಾಭಗಳಿವೆ. ಇ -ಖಾತಾ ಮಾಡಿಸಿಕೊಂಡಿದ್ದರೆ, ಆಸ್ತಿ ಖರೀದಿ ಹಾಗೂ ಆಸ್ತಿ ಮಾರಾಟದಲ್ಲಿ ಹಲವು ಲಾಭಗಳು ಆಗಲಿವೆ. ಅಲ್ಲದೆ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆ ಹಾಗೂ ವಿವರಗಳು ಅದರಲ್ಲೇ ಲಭ್ಯವಾಗಲಿದೆ.
Published On – 10:49 am, Sun, 29 June 25