ಕ್ಷುಲ್ಲಕ ಕಾರಣಕ್ಕೆ ಪ್ರೇಮಿಗಳ ದುರಂತ ಅಂತ್ಯ: ಮೊದಲು ಯುವತಿ ಆತ್ಮಹತ್ಯೆ, ವಿಷಯ ಕೇಳಿ ಯುವಕನೂ ಸೂಸೈಡ್
ಬಾಗಲಕೋಟೆ, ಏಪ್ರಿಲ್ 08: ವೈಮನಸ್ಸಿನ ಕಾರಣಕ್ಕೆ ಪ್ರೇಮಿಗಳಿಬ್ಬರು ದುರಂತ ಅಂತ ಕಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬನಹಟ್ಟಿಯ KHDC ಕಾಲೋನಿಯಲ್ಲಿ ಪ್ರಿಯತಮೆ ನೇಣಿಗೆ ಶರಣಾಗಿದ್ದರೆ, ವಿಷಯ ತಿಳಿದ ಪ್ರಿಯತಮ ರಬಕವಿಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಪವಿತ್ರಾ(19) ಮತ್ತು ಕಾರ್ತಿಕ್ ನಾಯಕ್(19) ಮೃತ ಪ್ರೇಮಿಗಳಾಗಿದ್ದಾರೆ. ನಿನ್ನೆ ಇಬ್ಬರ ಮಧ್ಯೆಯೂ ವೈಮನಸ್ಸು ಉಂಟಾಗಿ ಜಗಳ ನಡೆದಿತ್ತು. ಇದಾದ ಮನನೊಂದು ಮೊದಲು ಪವಿತ್ರಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಸ್ಥಳಕ್ಕೆ ಬನಹಟ್ಟಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ. ರಥದ…