ಡಾಕ್ಟರೆಟ್ ಕೊಡುವ ವಿಚಾರದಲ್ಲಿ ವಿವಿಗಳು ಸ್ವತಂತ್ರ, ಹಸ್ತಕ್ಷೇಪ ಮಾಡೋಲ್ಲ ಎಂದ ಹೈಕೋರ್ಟ್ | Universities Are Free To Award Doctorates Says Karnaaka High Court Rav
ಡಾ. ಎಚ್.ಸಿ. ಸತ್ಯನ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ನೀಡಿದ ನಾಡೋಜ ಪದವಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಪದವಿ ಪ್ರದಾನದಂತ ವಿಷಯಗಳಲ್ಲಿ ವಿಶ್ವವಿದ್ಯಾಲಯಗಳು ಸ್ವತಂತ್ರವಾಗಿವೆ ಮತ್ತು ಆಧಾರರಹಿತ ಆರೋಪ ಸಲ್ಲ ಎಂದಿದೆ. ಬೆಂಗಳೂರು (ಏ.8): ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಪ್ರಭಾರ ಮುಖ್ಯ ಮಾಹಿತಿ ಆಯುಕ್ತರಾಗಿದ್ದು, ಈಗ ನಿವೃತ್ತಿ ಹೊಂದಿರುವ ಡಾ.ಎಚ್.ಸಿ. ಸತ್ಯನ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪದವಿ ಪ್ರದಾನ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ…