ಮಂಗಳೂರು:ಮೊಹಮ್ಮದ್ ಜೊತೆ ವೈಶಾಲಿ ರನ್ನಿಂಗ್ ಮದುವೆ, ವಿದೇಶದಿಂದ ಓಡೋಡಿ ಬಂದ ತಂದೆ,ಮಗಳೊಂದಿಗೆ ಮಾತಾಡಿಲ್ಲವೆಂದು ಗೋಳಾಟ | Mangaluru Case Filed After College Student Allegedly Elopes With Youth From Another Community
ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಸರಗೋಡಿನ ಯುವತಿ, ಅನ್ಯಕೋಮಿನ ಯುವಕನೊಂದಿಗೆ ನೋಂದಣಿ ಮದುವೆಯಾಗಿದ್ದಾಳೆ. ಮಗಳಿಗೆ ಬ್ರೈನ್‌ವಾಶ್ ಮಾಡಿ, ಬ್ಲ್ಯಾಕ್‌ಮೇಲ್ ಮೂಲಕ ಕರೆದೊಯ್ಯಲಾಗಿದೆ ಎಂದು ಪೋಷಕರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಗಳೂರು: ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನ್ಯಕೋಮಿನ ಯುವಕನೊಂದಿಗೆ ಯುವತಿ ಪರಾರಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಈ ವಿಚಾರ ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸುರತ್ಕಲ್‌ನ ಮುಕ್ಕದಲ್ಲಿರುವ ಕಾಲೇಜೊಂದರಲ್ಲಿ ಕ್ರಿಮಿನಾಲಜಿ ವ್ಯಾಸಂಗ ಮಾಡುತ್ತಿದ್ದ ಕಾಸರಗೋಡು ಆರ್.ಡಿ. ನಗರದ ಮೀಪುಗುರಿ ನಿವಾಸಿ…