ಪಾಕಿಸ್ತಾನ ಅಥವಾ ಚೀನಾ, ಅಮೆರಿಕ-ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮಾಡಿದ್ಯಾರು?
ಟೆಹ್ರಾನ್, ಏಪ್ರಿಲ್ 08: ಅಮೆರಿಕ-ಇರಾನ್(ಇರಾನ್) ಅಂತೂ ಕದನವಿರಾಮಕ್ಕೆ ಒಪ್ಪಿಗೆ ನೀಡಿವೆ. ಇದರ ಪರಿಣಾಮವಾಗಿ ಹಾರ್ಮುಜ್ ಜಲಸಂಧಿಯನ್ನೂ ತೆರೆಯಲಾಗಿದೆ. ದ್ವಿಪಕ್ಷೀಯ ಕದನ ವಿರಾಮದಿಂದಾಗಿ ಇರಾನ್ ಮೇಲಿನ ಸಂಭಾವ್ಯ ದಾಳಿಗಳನ್ನು ಎರಡು ವಾರಗಳ ಕಾಲ ತಡೆಹಿಡಿಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಟ್ರಂಪ್ ಅವರ ನಿರ್ಧಾರಕ್ಕೆ ಅಮೆರಿಕ ಸೇನೆಯು ಇರಾನ್ ವಿರುದ್ಧ ಎಲ್ಲಾ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ಅಮೆರಿಕದೊಂದಿಗೆ ಕದನ ವಿರಾಮಕ್ಕೆ ದಾರಿ ಮಾಡಲು ಇರಾನ್‌ಗೆ ಪ್ರೋತ್ಸಾಹ ನೀಡಿವೆ. ಮಾತುಕತೆ ನಡೆಯುತ್ತಿರುವ…