ಜನ ಒಳಗಿದ್ದಾಗಲೇ ಪುರಸಭೆ ಕಟ್ಟಡಕ್ಕೆ ಬೀಗ ಜಡಿದು ಹೋದ ನೌಕರ: ಸಿಬ್ಬಂದಿ ಒಳಗೇ ಲಾಕ್!
ಉಡುಪಿ, ಫೆಬ್ರವರಿ 11: ಉಡುಪಿ ಜಿಲ್ಲೆಯ ಕಾಪು ಕಾಲೇಜು ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋನಾ ಪ್ರಾಧಿಕಾರದ ಸಿಬ್ಬಂದಿಯನ್ನು ಕಚೇರಿ ಒಳಗೆಯೇ ಲಾಕ್ ಅಚಾತುರ್ಯ ಮಂಗಳವಾರ ಸಂಜೆ ನಡೆಯಿತು. ಕೆಲಕಾಲ ಆತಂಕ ಹಾಗೂ ಗೊಂದಲ ಉಂಟಾಯಿತು. ಪ್ರತಿದಿನ ಕಾಪು ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಯೋಜನಾ ಪ್ರಾಧಿಕಾರದ ಕಚೇರಿಗೆ ತೆರಳಲು ದ್ವಾರವಿದೆ, ಸಂಜೆ 5.30 ರಿಂದ 6 ಗಂಟೆಯೊಳಗೆ ಪುರಸಭೆ ಸಿಬ್ಬಂದಿ ಬಾಗಿಲಿಗೆ ಬೀಗ ಹಾಕುವ ಪದ್ಧತಿ ಇದೆ. ಸಾಮಾನ್ಯವಾಗಿ ಬೀಗ ಹಾಕುವ ಮೊದಲು ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಆದರೆ,…