ಜಾತ್ರೆಯಲ್ಲಿ ಕುಸಿದು ಬಿದ್ದ 60 ಅಡಿ ಎತ್ತರದ ಜಾಯಿಂಟ್ ವೀಲ್; 30ಕ್ಕೂ ಹೆಚ್ಚು ಮಂದಿಗೆ ಗಾಯ! | Kushinagar Up Mela Giant Swing Collapse 30 Injured Safety Lapse News San
ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದ ವಾರ್ಷಿಕ ಜಾತ್ರೆಯಲ್ಲಿ 60 ಅಡಿ ಎತ್ತರದ ದೈತ್ಯ ಜಾಯಿಂಟ್ ವೀಲ್ ಕುಸಿದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಹೊತ್ತಿದ್ದರಿಂದ ಹಾಗೂ ದುರ್ಬಲ ಬುನಾದಿಯಿಂದಾಗಿ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಕುಶಿನಗರ (ಉತ್ತರ ಪ್ರದೇಶ): ವಾರ್ಷಿಕ ಜಾತ್ರೆಯ ಸಂಭ್ರಮದಲ್ಲಿದ್ದ ಜನರಿಗೆ ಬುಧವಾರ ರಾತ್ರಿ ಅನಿರೀಕ್ಷಿತ ಆಘಾತ ಕಾದಿತ್ತು. ಖಡ್ಡಾ ಪ್ರದೇಶದ ಭೈಂಸಹಾ (ಚೈತ್ ಬರ್ನಿ) ಮೇಳದಲ್ಲಿ ಕಾರ್ಯಾಚರಣೆಯಲ್ಲಿದ್ದ 60 ಅಡಿ ಎತ್ತರದ ದೈತ್ಯ ಜಾಯಿಂಟ್ ವೀಲ್ (ಸ್ವಿಂಗ್…