India’s FTA: ಅಂತಿಂಥ ದೇಶಳೊಂದಿಗೆ ಇಲ್ಲ ಮುಖ್ಯ ವ್ಯಾಪಾರ ಒಪ್ಪಂದ; ಭಾರತದ ನೀತಿಯಲ್ಲಿ ಹೊಸ ದೃಷ್ಟಿಕೋನ
ನವದೆಹಲಿ, ಜೂನ್ 22: ಈಗ ಹಲವು ದೇಶಗಳು ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದ (FTA- Free Trade Agreement) ಮಾಡಿಕೊಳ್ಳಲು ಬಯಸುತ್ತಿವೆ. ಎಲ್ಲಾ ದೇಶಗಳೊಂದಿಗೆ ಎಫ್ಟಿಎ ಮಾಡಿಕೊಂಡರೆ ಕೆಲ ದೇಶೀಯ ಉದ್ಯಮಗಳಿಗೆ ಸಂಚಕಾರವಾಗಬಹುದು. ಹೀಗಾಗಿ, ಭಾರತವು ಆಯ್ದ ದೇಶಗಳೊಂದಿಗೆ ಮಾತ್ರ ಫ್ರೀ ಟ್ರೇಡ್ ಅಗ್ರೀಮೆಂಟ್ ಮಾಡಿಕೊಳ್ಳಲು ನಿರ್ಧರಿಸಿದಂತಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಭಾರತವು ಮುಕ್ತ ವ್ಯಾಪಾರ ಒಪ್ಪಂದಕ್ಕೆ ದೇಶಗಳನ್ನು ಆಯ್ಕೆ ಮಾಡಿಕೊಳ್ಳಲು ನಾಲ್ಕು ಮಾನದಂಡಗಳನ್ನು ಇಟ್ಟುಕೊಂಡಿದೆ. ಇಂಥದ್ದೊಂದು ನೀತಿಯನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಎಫ್ಟಿಎಗೆ…