ಬಾಂಗ್ಲಾದೇಶದ ಬಹುದೊಡ್ಡ ಉದ್ಯಮಕ್ಕೆ ಹಿನ್ನಡೆ; ಭಾರತಕ್ಕೆ ವರ್ಗಾವಣೆ ಆಗುತ್ತಿರುವ ಜವಳಿ ಸರಬರಾಜು ಸರಪಳಿ
ನವದೆಹಲಿ, ಜೂನ್ 22: ಜಾಗತಿಕ ಜವಳಿ ಉದ್ಯಮದ ಸರಬರಾಜು ಸರಪಳಿಯಲ್ಲಿ ಬದಲಾವಣೆ ಆಗುತ್ತಿದೆ. ಚೀನಾ, ಬಾಂಗ್ಲಾದೇಶಗಳು ಜವಳಿ ವಸ್ತುಗಳ (garments) ಸರಬರಾಜು ವಿಚಾರದಲ್ಲಿ ಪ್ರಬಲವಾಗಿವೆ. ಬಾಂಗ್ಲಾದೇಶದ ಪ್ರಮುಖ ಆದಾಯ ಮೂಲವೇ ಜವಳಿ ಕ್ಷೇತ್ರವಾಗಿದೆ. ಈಗ ಜಾಗತಿಕ ಜವಳಿ ಸರಬರಾಜು ಸರಪಳಿಯಲ್ಲಿ (global supply chain) ಚೀನಾ, ಬಾಂಗ್ಲಾದೇಶದಿಂದ ಭಾರತಕ್ಕೆ ಹಂತ ಹಂತಕ್ಕೆ ಬದಲಾವಣೆ ಆಗತೊಡಗಿದೆ. ಅಂದರೆ, ಜವಳಿ ಆಮದು ಮಾಡಿಕೊಳ್ಳಲು ಚೀನಾ ಮತ್ತು ಬಾಂಗ್ಲಾ ಬದಲು ಭಾರತಕ್ಕೆ ಆದ್ಯತೆ ನೀಡಲಾಗುತ್ತಿದೆ. ಇಂಥದ್ದೊಂದು ಬೆಳವಣಿಗೆ ಆಗುತ್ತಿದೆ ಎನ್ನುವ ಸುದ್ದಿಗೆ…