Deadly Sea Snake Spotted on Goa Beach: ಗೋವಾ ಬೀಚ್‌ನಲ್ಲಿ ಅತ್ಯಂತ ವಿಷಕಾರಿ ಸಮುದ್ರ ಹಾವು ಪತ್ತೆ | Venomous Sea Snake Caught On Camera At Goa Beach
ಗೋವಾದ ಬೀಚ್‌ವೊಂದರಲ್ಲಿ ವಿಷಕಾರಿ ಸಮುದ್ರ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಣಜಿ: ಗೋವಾದ ಬೀಚೊಂದರಲ್ಲಿ(Goa Beach) ಅತ್ಯಂತ ವಿಷಕಾರಿಯಾದ ಸಮುದ್ರ ಹಾವೊಂದು (Sea Snake) ಪತ್ತೆಯಾಗಿದ್ದು, ಈ ವೀಡಿಯೋ ಅನೇಕರನ್ನು ಭಯಭೀತಗೊಳಿಸಿದೆ. ಜೀಬ್ರಾದಂತೆ ಕಪ್ಪು ಹಾಗೂ ಬಿಳಿ ಪಟ್ಟಿ ಇರುವ ಹಾವೊಂದು ಸಮುದ್ರ ತೀರದಲ್ಲಿ ಮರಳಿನಲ್ಲಿ ಹೊರಳಾಡುತ್ತಿದ್ದು, ಅದರ ದೇಹದ ಮಧ್ಯಭಾಗದಲ್ಲಿ ಏನು ಸಿಲುಕಿದಂತೆ ಕಾಣುತ್ತಿದ್ದು, ಅದು ಅಲ್ಲಿಂದ ಹೋಗಲು ಕಷ್ಟಪಡುವಂತೆ ಕಾಣುತ್ತಿದೆ. ಇದನ್ನು ಯಾರೋ ಪ್ರವಾಸಿಗರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ(Social…