ಅರುಣಾಚಲದ ಈ ಪುಟ್ಟ ಬಾಲೆಯ ‘ಜನಗಣಮನ’ ಹಾಡಿಗೆ ಫಿದಾ ಆದ ನೆಟ್ಟಿಗರು: ವೀಡಿಯೋ ನೋಡಿ | Arunachal Pradesh Girl Emotional Rendition Of Jana Gana Mana Melts Hearts
ಅರುಣಾಚಲ ಪ್ರದೇಶದ ಪುಟಾಣಿಯೊಬ್ಬಳು ರಾಷ್ಟ್ರಗೀತೆ ಹಾಡುತ್ತಿರುವ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 79ನೇ ಸ್ವಾತಂತ್ರ ದಿನಾಚರಣೆಗೆ ದೇಶ ಸಜ್ಜಾಗುತ್ತಿರುವ ಈ ಸಮಯದಲ್ಲಿ ಈ ವಿಡಿಯೋ ಎಲ್ಲರ ಹೃದಯ ಗೆದ್ದಿದೆ. ಭಾರತದ 79ನೇ ಸ್ವಾತಂತ್ರ ದಿನಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ಅರುಣಾಚಲದ ಪ್ರದೇಶದ ಪುಟಾಣಿಯೊಬ್ಬಳು ನಮ್ಮ ದೇಶದ ರಾಷ್ಟ್ರಗೀತೆಗೆ ದನಿಗೂಡಿಸುತ್ತಿರುವ ಮುದ್ದಾದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. 79ನೇ ಸ್ವಾತಂತ್ರ ದಿನಾಚರಣೆಗೆ ಬರೀ 3 ದಿನವಷ್ಟೇ ಬಾಕಿ…